ಕೊಡಗಿನ ಮಳೆ ಹಾನಿ ಅಧ್ಯಯನಕ್ಕೆ ಕೇಂದ್ರ ತಂಡ ಆಗಮನ

08/09/2020

ಮಡಿಕೇರಿ ಸೆ. 8 : ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಹಾನಿ ವೀಕ್ಷಿಸಲು ಇಂದು ಕೇಂದ್ರ ತಂಡವು ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್ ಆಗಮಿಸಿತು. ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್, ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾರ್ತೇಂದು ಕುಮಾರ್ ಸಿಂಗ್ ಹಾಗೂ ಭಾರತ ಸರ್ಕಾರದ ಕೆ.ಎಸ್.ಡಿ.ಎಂ.ಎ. ಆಯುಕ್ತರಾದ ಮನೋಜ್ ರಂಜನ್ ಅವರು ಕೇಂದ್ರ ತಂಡದಲ್ಲಿದ್ದು, ಜಿಲ್ಲಾಧಿಕಾರಿ ‌ಅನೀಸ್ ಕಣ್ಮಣಿ ಜಾಯ್ ಅವರಿಂದ ಮಾಹಿತಿ ಪಡೆದರು.