ಆರ್ಥಿಕ ಬೆಳವಣಿಗೆ ಶೇ. 23.9 ರಷ್ಟು ಕುಸಿತ

ನವದೆಹಲಿ ಸೆ.7 : ತ್ರೈಮಾಸಿಕ ಆರ್ಥಿಕ ಬೆಳವಣಿಗೆಯಲ್ಲಿ ಶೇ 23.9 ರಷ್ಟು ಕುಸಿತ ಕಂಡಿರುವುದು ಎಚ್ಚರಿಕೆಯ ಕರೆಗಂಟೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ, ಅಧಿಕಾರದಲ್ಲಿದ್ದವರು ನಿದ್ರೆಯಿಂಡ ಹೊರಬಂದು ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಬಿಕ್ಕಟ್ಟಿಗೆ ಹೆಚ್ಚು ಚಿಂತನಶೀಲ ಮತ್ತು ಕ್ರಿಯಾಶೀಲ ಸರ್ಕಾರಿ ನೀತಿ ಅಗತ್ಯವಿದೆ, ದುರದೃಷ್ಟವಶಾತ್, ಆರಂಭಿಕ ಚಟುವಟಿಕೆಯ ಅತಿರೇಕದ ನಂತರ ಅದು ಚಿಪ್ಪಿನೊಳಗೆ ಅಡಗಿರುವಂತೆ ಕಾಣುತ್ತಿದೆ. “ಆರ್ಥಿಕ ಬೆಳವಣಿಗೆಯ ತೀವ್ರ ಕುಸಿತವು ನಮ್ಮೆಲ್ಲರಿಗೆ ಎಚ್ಚರಿಕೆ. ಭಾರತದಲ್ಲಿ ಶೇಕಡಾ 23.9 ರಷ್ಟು ಸಂಕೋಚನ ಮತ್ತು ಅನೌಪಚಾರಿಕ ವಲಯದಲ್ಲಿನ ಹಾನಿಯ ಅಂದಾಜುಗಳನ್ನು ನಾವು ಪಡೆದಾಗ ಸಂಖ್ಯೆಗಳು ಇನ್ನಷ್ಟು ಕೆಟ್ಟದಾಗಿರಲಿದೆ. ಇಟಲಿಯಲ್ಲಿ ಶೇಕಡಾ 12.4 ರಷ್ಟು ಕುಸಿತದೊಂದಿಗೆ ಹೋಲಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಶೇಕಡಾ 9.5 ರಷ್ಟು ಕುಸಿತ ದಾಖಲಾಗಿದೆ. ಆ ಎರಡೂ ಕೋವಿಡ್ -19 ಪೀಡಿತ ಮುಂದುವರಿದ ರಾಷ್ಟ್ರಗಳು.” ರಾಜನ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
