250 ಕೆಜಿ ಗಾಂಜಾ ವಶ

08/09/2020

ಬೆಂಗಳೂರು ಸೆ.8 : ಬೆಂಗಳೂರಿನಲ್ಲಿ 250 ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪರಪ್ಪನ ಅಗ್ರಹಾರ ಪೊಲೀಸರಿಂದ 150 ಕೆಜಿ ಗಾಂಜಾ ಜಪ್ತಿಮಾಡಿಕೊಳ್ಳಲಾಗಿದೆ ಎಂದರು.
ಕಬಾಬ್ ಅಂಗಡಿಯನ್ನಿಟ್ಟುಕೊಂಡಿದ್ದ ಪೆಡ್ಲರ್ ಜೊತೆಗೆ ಪೊಲೀಸ್ ಸಿಬ್ಬಂದಿಯೊಬ್ಬರ ಮಗ ಸಹ ಇದರಲ್ಲಿ ಪೆಡ್ಲರ್ ಆಗಿದ್ದ. ತಳಮಟ್ಟದಲ್ಲಿ ಆಗಬಹುದಾದ ಸಮಸ್ಯೆಯನ್ನು ಸಿಬ್ಬಂದಿ ತಡೆದಿದ್ದಾರೆ ಎಂದರು.