ಡ್ರಗ್ಸ್ ಪ್ರಕರಣಕ್ಕೆ ಸಂಬಂಧವಿಲ್ಲವಂತೆ !

08/09/2020

ಬೆಂಗಳೂರು ಸೆ.8 : ಡ್ರಗ್ಸ್ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಿಸಿಬಿ ವಶದಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಗೊಳಗಾಗಿರುವ ರಾಗಿಣಿ, ಪೊಲೀಸ್ ವಿಚಾರಣೆ ವೇಳೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ತಾನೊಬ್ಬಳು ಸ್ಯಾಂಡಲ್ ವುಡ್ ನ ಸ್ಟಾರ್ ನಟಿ. ತಾವು ಬೆಳೆಯುತ್ತಿರುವುದನ್ನು ಸಹಿಸದವರು ಬಹಳ ಜನರಿದ್ದಾರೆ. ಆದ್ದರಿಂದ ಈ ಆರೋಪಗಳು ಕೇಳಿ ಬಂದಿದೆ ಎಂದಿದ್ದಾರಂತೆ. ಇನ್ನು ಸ್ಟಾರ್ ನಟಿಯಾಗಿರುವುದರಿಂದ ಪಾರ್ಟಿಗಳಿಗೆ ಹೋಗುತ್ತಿದೆ. ಆದರೆ ಡ್ರಗ್ಸ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.