ಲಿಫ್ಟ್ ಕೆಳಗೆ ಸಿಲುಕಿ ಉದ್ಯಮಿ ಸಾವು

08/09/2020

ಮುಂಬೈ ಸೆ.8 : ಲಿಫ್ಟ್ ಬರುವುದಕ್ಕೂ ಮುನ್ನ ಒಳಹೊಕ್ಕ ಖ್ಯಾತ ಉದ್ಯಮಿಯೊಬ್ಬರು ಲಿಫ್ಟ್ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ.
ಮುಂಬೈನ ರಿಟೇಲ್ ಚೈನ್ ಕೊಹಿನೂರು ಎಲೆಕ್ಟ್ರಾನಿಕ್ಸ್ ನಿರ್ದೇಶಕ 46 ವರ್ಷದ ವಿಶಾಲ್ ಮೇವಾನಿ ಮೃತ ದುರ್ದೈವಿ. ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ವಿಶಾಲ್ ಅವರು ತಮ್ಮ ಪುತ್ರಿ ರೇಷ್ಮಾ ಜೊತೆ ಮುಂಬೈನ ವರ್ಲಿಗೆ ಬಂದಿದ್ದರು. ಈ ವೇಳೆ ಗೆಳೆಯನನ್ನು ಭೇಟಿ ಮಾಡುವ ಸಲುವಾಗಿ ಎರಡನೇ ಮಹಡಿಗೆ ಹೋಗಲು ಲಿಫ್ಟ್ ಬಟನ್ ಒಪ್ಪಿದ್ದಾರೆ. ಆದರೆ ಲಿಫ್ಟ್ ಬರುವುದಕ್ಕೂ ಮುನ್ನ ಡೋರ್ ಓಪನ್ ಆಗಿದ್ದರಿಂದ ಅವರು ಒಳ ಹೋಗಿದ್ದಾರೆ.
ಈ ವೇಳೆ ಮೇಲಿಂದ ಲಿಫ್ಟ್ ಬರುತ್ತಿರುವುದನ್ನು ಕಂಡ ವಿಶಾಲ್ ಹೊರಬರಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಲಿಫ್ಟ್ ಕೆಳಗೆ ಸಿಲುಕಿ ಅಪ್ಪಿಚ್ಚಿಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಬದುಕುಳಿಯಲಿಲ್ಲ. ಆದರೆ ಪುತ್ರಿ ರೇಷ್ಮಾ ಮಾತ್ರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.