ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪರಿಹಾರ ಒದಗಿಸುವ ಭರವಸೆ : ಸತ್ಯಾಗ್ರಹ ಕೈಬಿಟ್ಟ ಹೋರಾಟಗಾರರು

08/09/2020

ಮಡಿಕೇರಿ ಸೆ. 8 : ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕೈಬಿಡುವ ಮೂಲಕ ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.
ಹುದಿಕೇರಿ ಹೋಬಳಿಯ ನಾಡ ಕಚೇರಿಯ ಮುಂದೆ ನಿವೇಶನ ರಹಿತರಿಗೆ ನಿವೇಶ ನೀಡಬೇಕು ಹಾಗೂ ಗುಡಿಸಿನಲ್ಲಿ ನೆಲೆಸಿರುವ ಕುಟುಂಬಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ ಹಾಗೂ ವಿಭಾಗೀಯ ಸಂಚಾಲಕ ಹೆಚ್.ಪಿ. ಕೃಷ್ಣಪ್ಪ ಮುಂದಾಳತ್ವದಲ್ಲಿ ಉಪವಾಸ ಮುಷ್ಕರ ಕೈಗೊಳ್ಳಲಾಗಿತ್ತು.
ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾ ಉಪ ವಿಭಾಗಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು.
ನಿವೇಶನ ರಹಿತರಿಗೆ ನಿವೇಶನ ನೀಡುವ ಸಲುವಾಗಿ 15 ದಿನಗಳ ಒಳಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೋರಾಟಗಾರ ಸಮ್ಮುಖದಲ್ಲಿ ಪ್ರಮುಖ ಅಧಿಕಾರಿಗಳು ಸಭೆ ಸೇರಿ ಆ ಮೂಲಕ ಸಾಧಕ, ಬಾಧಕಗಳ ಚರ್ಚೆ ನಡೆಸುವುದು ಹಾಗೂ ಈ ಬಾರಿ ಸುರಿದ ಮಳೆಯಿಂದಾಗಿ ನಷ್ಟ ಸಂಭವಿಸಿದ ಕುಟುಂಬಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪಡಿಕಲ್ ಕುಸುಮವತಿ, ಪರ್ಮಾಲೆ ಗಣೇಶ್, ಪ್ರಾಂತ್ಯ ರೈತ ಸಂಘದ ಪ್ರಮುಖರು, ದ.ಸಂ.ಸ. ತಾಲ್ಲೂಕು ಸಂಚಾಲಕ ಚಂದ್ರ, ಪದಾಧಿಕಾರಿಗಳಾದ ರಜನಿಕಾಂತ್, ಶಿವಣ್ಣ, ರಮೇಶ್, ವಕೀಲರಾದ ಸುನೀಲ್, ನಿವೇಶನ ರಹಿತರು ಇದ್ದರು.