ಸುಂಟಿಕೊಪ್ಪದಲ್ಲಿ ಸರಳವಾಗಿ ನಡೆದ ಕ್ರೈಸ್ತರ ಮಾತೆ ಮರಿಯಮ್ಮ ಜನ್ಮದಿನೋತ್ಸವ

September 8, 2020

ಸುಂಟಿಕೊಪ್ಪ,ಸೆ.8:ಯೇಸುಕ್ರಿಸ್ತರ ತಾಯಿ ಕ್ಯಾಥೋಲಿಕ್ ಕ್ರೈಸ್ತರ ಮಾತೆ ಮರಿಯಮ್ಮನವರ ಜನ್ಮದಿನೋತ್ಸವವನ್ನು ಸುಂಟಿಕೊಪ್ಪದ ಸಂತ ಮೇರಿ ಶಾಲಾ ಆವರಣದಲ್ಲಿ ಕರೋನಾ ಕರಿಛಾಯಿಂದಾಗಿ ಸರಕಾರದ ನಿರ್ದೇಶದಂತೆ ಸರಳ ರೀತಿಯಲ್ಲಿ ಸಾಮಾಜಿಕ ಅಂತರದೊಂದಿಗೆ ದಿವ್ಯ ಬಲಿಪೂಜೆಯನ್ನು ಧರ್ಮಗುರುಗಳು ನೇರವೇರಿಸಿ ಕ್ರೈಸ್ತ ಬಾಂಧವರು ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಮಾತೆ ಮರಿಯಮ್ಮನವರ ಜನ್ಮದಿನದ ಬಲಿಪೂಜೆಗೂ ಮುನ್ನ ಶಾಲಾವರಣವನ್ನು ಸ್ಯಾನಿಟೈಸರ್‍ಗೊಳಿಸಿ ಆಗಮಿಸಿದ ಭಕ್ತಾಧಿಗಳಿಗೆ ಥರ್ಮಾಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ನೀಡಿ ಮುನ್ನಚ್ಚರಿಕೆಯನ್ನು ವಹಿಸಿದರು.
ತಾ.8 ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ವಿಶ್ವದದ್ಯಾಂತ ಆಚರಿಸಲಾಗುತ್ತಿದ್ದು ಅದಕ್ಕೆ ಪೂರ್ವಭಾವಿಯಾಗಿ ನಡೆಯುವ 9 ದಿನಗಳ ದಿವ್ಯ ಬಲಿಪೂಜೆ ಹಾಗೂ ನೊವೇನಾ ಪ್ರಾರ್ಥನೆ ಆಗಸ್ಟ್ 30 ರಿಂದ ಆರಂಭಿಸಿ ತಾ.8 ರವರೆಗೆ ಜನ್ಮದಿನವನ್ನು ಆಚರಿಸಲಾಯಿತು.
ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕಮಕ್ಕಳು,ಯವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜÉಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಕ್ರಿಸ್ತರ ತಾಯಿ ನಮ್ಮೆಲ್ಲಾರ ಮಾತೆ ಮರಿಯಮ್ಮನವರಿಗೆ ಸಮರ್ಪಿಸುತ್ತಾರೆ.
9 ದಿನಗಳ ನೊವೇನಾ ಕಾರ್ಯಕ್ರಮಗಳ ಬಳಿಕ 10ನೇ ದಿನ ಸೆ.8 ರಂದು ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಆನಂತರ ಮನೆ ಮನೆಗಳಲ್ಲಿ ಆಚರಿಸುವುದು ಸಂಪ್ರದಾಯವಾಗಿದೆ.
ಮೊಂತಿ ಪೆಸ್ತ್ ಅಂಗವಾಗಿ ಮಂಗಳವಾರ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೆಲ್ವಕುಮಾರ್ ಹಾಗೂ ಸಹಾಯಕ ಧರ್ಮಗುರುಗಳಾದ ಮದಲೈ ಮುತ್ತು ಅವರು ಸರಳ ದಿವ್ಯ ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ ಮೊಂತಿಪೆಸ್ತ್ ಅಂಗವಾಗಿ ನೂತನ ತೆನೆಗಳನ್ನು ಆರ್ಶಿವಚಿಸಿ ವಿತರಿಸಿದರು. ಕ್ರೈಸ್ತ ಬಾಂದವರು ಮನೆ ಮನೆಗಳಿಂದ ಒಗೂಡಿಸಿ ತಂದಿದ ಬಗೆ ಬಗೆಯ ಪುಷ್ಪಗಳನ್ನು ಎಲ್ಲಾರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾತೆ ಮಯರಿಮ್ಮನವರಿಗೆ ಸಮರ್ಪಿಸುವ ಮೂಲಕ ಹಬ್ಬದ ಸಂಡಗರಕ್ಕೆ ಮುನ್ನುಡಿ ಇಟ್ಟರು.