ಕೊಡಗಿನಲ್ಲಿ ಮಂಗಳವಾರ 24 ಹೊಸ ಪ್ರಕರಣ ಪತ್ತೆ : 1409 ಮಂದಿ ಗುಣಮುಖ

08/09/2020

ಮಡಿಕೇರಿ ಸೆ. 8 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 17 ಮತ್ತು ಮಧ್ಯಾಹ್ನ 2 ಗಂಟೆಗೆ 7 ಸೇರಿದಂತೆ ಒಟ್ಟು 24 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಯಡೂರುವಿನ ಮಾವಿನಕಟ್ಟೆ ಬಳಿಯ 26 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 26 ವರ್ಷದ ಪುರುಷ. ಮಡಿಕೇರಿ ರೋಟರಿ ಹಾಲ್ ಬಳಿಯ 39 ವರ್ಷದ ಪುರುಷ. ಮಡಿಕೇರಿ ಪುಟಾಣಿ ನಗರದ 59 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ 3ನೇ ಬ್ಲಾಕಿನ 23 ಮತ್ತು 85 ವರ್ಷದ ಮಹಿಳೆಯರು. ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ಲಾಲಿ ಪೆಟಲ್ಸ್ ಹೋಂಸ್ಟೇಯ 41 ವರ್ಷದ ಪುರುಷ.
ಸೋಮವಾರಪೇಟೆ ಬೆಳ್ಳೂರು ರಸ್ತೆಯ ವಿನಾಯಕ ರೈಸ್ ಮಿಲ್ ಬಳಿಯ 58 ವರ್ಷದ ಮಹಿಳೆ. ಸೋಮವಾರಪೇಟೆ ಐಗೂರು ಗ್ರಾಮ ಮತ್ತು ಅಂಚೆಯ 35 ವರ್ಷದ ಮಹಿಳೆ, 38 ವರ್ಷದ ಪುರುಷ, 55 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕ. ವಿರಾಜಪೇಟೆ ಕೋತೂರು ಗ್ರಾಮ ಮತ್ತು ಅಂಚೆಯ ಮಾರಮ್ಮ ದೇವಾಲಯ ಬಳಿಯ 68 ವರ್ಷದ ಮಹಿಳೆ, 48 ಮತ್ತು 84 ವರ್ಷದ ಪುರುಷರು. ಸೋಮವಾರಪೇಟೆ ಶಾಂತಳ್ಳಿ ಗ್ರಾಮ ಮತ್ತು ಅಂಚೆಯ 56 ಮತ್ತು 27 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮಕ್ಕಂದೂರಿನ 61 ವರ್ಷದ ಪುರುಷ. ಮಡಿಕೇರಿ ವಿದ್ಯಾನಗರದ ಕೇಂದ್ರೀಯ ವಿದ್ಯಾಲಯ ಹತ್ತಿರದ 29 ವರ್ಷದ ಪುರುಷ. ವಿರಾಜಪೇಟೆ ಪಂಜರಪೇಟೆಯ 42 ವರ್ಷದ ಪುರುಷ. ಮಡಿಕೇರಿಯ ಅಖಿಲ ರವಿ ಆರ್ಯುವೇದ ಆಸ್ಪತ್ರೆ ಪೆನ್ಸನ್ ಲೈನ್ ಹತ್ತಿರ 24 ವರ್ಷದ ಪುರುಷ. ಕುಶಾಲನಗರ ಬಿ.ಎಂ.ರಸ್ತೆಯ ರೋಟರಿ ಕ್ಲಬ್ ಎದುರಿನ 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ಮೈತ್ರಿ ಹಾಲ್ ಹತ್ತಿರದ ಪೊಲೀಸ್ ವಸತಿ ಗೃಹದ 59 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ 55 ವರ್ಷದ ಪುರುಷ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1765 ಆಗಿದ್ದು, 1409 ಮಂದಿ ಗುಣಮುಖರಾಗಿದ್ದಾರೆ. 333 ಸಕ್ರಿಯ ಪ್ರಕರಣಗಳಿದ್ದು, 23 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 294 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.