ಕೋವಿಡ್ ಸೋಂಕಿಗೆ ಮಡಿಕೇರಿಯ ಹಿರಿಯ ವಕೀಲ ಬಲಿ

09/09/2020

ಮಡಿಕೇರಿ : ಮಡಿಕೇರಿಯ ಹೆಸರಾಂತ ವಕೀಲ ಹಾಗೂ ನೋಟರಿಯೊಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಬಿ.ಆರ್.ಹೊನ್ನಪ್ಪ (67) ಎಂಬುವವರೇ ನಿಧನರಾದ ವಕೀಲ. ಇವರಿಗೆ ಕೋವಿಡ್ ಸೋಂಕು ತಗುಲಿತ್ತು. ಮಡಿಕೇರಿಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ. ಹೊನ್ನಪ್ಪ ಅವರ ಅಗಲಿಕೆಗೆ ಮಡಿಕೇರಿ ವಕೀಲರ ಸಂಘದ ಸಂತಾಪ ಸೂಚಿಸಿದೆ.