ಯುವಕರು ಚೀನಾ ಗಡಿಯೊಳಗೆ ಪತ್ತೆ

09/09/2020

ನವದೆಹಲಿ ಸೆ.9 : ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ಚೀನಾದ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಯುವಕರು ನಾಪತ್ತೆ ಕುರಿತಂತೆ ಭಾರತೀಯ ಸೇನೆಯು ಕಳುಹಿಸಿದ್ದ ಹಾಟ್ ಲೈನ್ ಸಂದೇಶಕ್ಕೆ ಚೀನಾದ ಪೀಪಲ್ ಲಿಬರೇಷನ್ ಆರ್ಮಿ(ಪಿಎಲ್‍ಎ) ಪ್ರತಿಕ್ರಿಯಿಸಿದ್ದು ಐವರು ಭಾರತೀಯರು ತಮ್ಮ ಭಾಗದ ಗಡಿಯೊಳಗೆ ಇದ್ದಾರೆ ಎಂದು ಒಪ್ಪಿಕೊಂಡಿದೆ.
ಚೀನಾ ಗಡಿಯೊಳಗೆ ಪತ್ತೆಯಾಗಿರುವ ಭಾರತೀಯರನ್ನು ನಮ್ಮ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ನಾಚೋ ಪ್ರದೇಶದ ಗ್ರಾಮದ ಈ ಐವರು ಭಾರತೀಯ ಸೇನೆಯ ಕೂಲಿಗಳು ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು.