ರುಚಿಕರವಾ ಮಶ್ರೂಮ್ ನೂಡಲ್ಸ್ ಫ್ರೈ ಮಾಡುವ ವಿಧಾನ

09/09/2020

ಬೇಕಾಗುವ ಸಾಮಾಗ್ರಿಗಳು: ಒಂದು ಕಪ್ ಅಣಬೆ, ಒಂದು ಕಪ್ ನೂಡಲ್ಸ್, 2 ಈರುಳ್ಳಿ (ಕತ್ತರಿಸಿದ್ದು), 10 ಬೆಳ್ಳುಳ್ಳಿ ಎಸಳು (ಜಜ್ಜಿದ), ಮತ್ತು ಸ್ವಲ್ಪ ಜೀರಿಗೆ, ಕತ್ತರಿಸಿದ ಹಸಿಮೆಣಸಿನ ಕಾಯಿ 2, 4 ಚಮಚ ಹಾಲಿನ ಕೆನೆ, 3 ಚಮಚ ಬೆಣ್ಣೆ, ರುಚಿಗೆ ತಕ್ಕ ಉಪ್ಪು, 1/2 ಚಮಚ ಕರಿಮೆಣಸಿನ ಪುಡಿ, ತುರಿದ ಚೀಸ್ 5 ಚಮಚ

ತಯಾರಿಸುವ ವಿಧಾನ: ನೂಡಲ್ಸ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಬೇಯಿಸಬೇಕು. ನಂತರ ಬೆಂದ ನೂಡಲ್ಸ್ ಅನ್ನು ತಣ್ಣನೆಯ ನೀರಿನಲ್ಲಿ ಹಾಕಿ ತೆಗೆಯಬೇಕು. ಶುಚಿ ಮಾಡಿಟ್ಟ ಅಣಬೆಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಒಂದೂವರೆ ಚಮಚ ಬೆಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಬೇಕು. ಈಗ ನೂಡಲ್ಸ್ ಅನ್ನು ಅದರಲ್ಲಿ ಹಾಕಿ ಹಾಕಿ ಚಿಟಿಕೆಯಷ್ಟು ಉಪ್ಪು ಹಾಕಿ ಫ್ರೈ ಮಾಡಿ ಒಂದು ಪಾತ್ರೆಯಲ್ಲಿ ತೆಗೆದಿಡಬೇಕು.

ಉಳಿದ ಒಂದೂವರೆ ಚಮಚ ಬೆಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅಣಬೆ ಮತ್ತು ಸ್ವಲ್ಪ ಜೀರಿಗೆ ಹಾಕಿ 2 ನಿಮಿಷ ಬಿಸಿಮಾಡಬೇಕು. ನಂತರ ರುಚಿಗೆ ತಕ್ಕ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಅಣಬೆಯನ್ನು ಬೇಯಿಸಬೇಕು, ಅಣಬೆ ಬೆಂದಾಗ 4 ಚಮಚ ಹಾಲಿನ ಕೆನೆ (ಕ್ರೀಮ್) ಸೇರಿಸಬೇಕು.

ನಂತರ 2-3 ನಿಮಿಷ ಬೇಯಿಸಿ ನಂತರ ನೂಡಲ್ಸ್ ಹಾಕಿ ನಂತರ ತುರಿದ ಚೀಸ್ ಹಾಕಿ ಮಿಶ್ರ ಮಾಡಿದರೆ ರುಚಿಕರವಾದ ಮಶ್ರೂಮ್ ನೂಡಲ್ಸ್ ಫ್ರೈ ರೆಡಿ. ಇದನ್ನು ಟೊಮೆಟೊ ಸಾಸ್ ಜೊತೆ ಬಿಸಿಬಿಸಿಯಾಗಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.