ಮಗ್ಗುಲ ಗ್ರಾಮಸ್ಥರಿಂದ ತಲಕಾವೇರಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ

09/09/2020

ಮಡಿಕೇರಿ ಸೆ. 9 : ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮಸ್ಥರು ತಲಕಾವೇರಿ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ ನೆರವೇರಿಸಿದರು.
ಮಳೆಯಿಂದಾಗಿ ದೇವಾಲಯದ ಆವರಣದಲ್ಲಿ ಕಟ್ಟಿದ್ದ ಪಾಚಿ, ಕಸ ಕಡ್ಡಿಗಳನ್ನು ಪುಲಿಯಂಡ, ಚೋಕಂಡ, ಚೋವಂಡ, ಕುಪ್ಪಚ್ಚೀರ, ಕೊಟ್ಟಿಯಂಡ, ವಾಟೇರಿರ ಕುಟುಂಬದ ಸದಸ್ಯರು ಸ್ವಚ್ಚಗೊಳಿಸಿದರು.
ಈ ಸಂದರ್ಭ ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ಪ್ರಮುಖರಾದ ಚೋಕಂಡ ರಮೇಶ್, ಕುಪ್ಪಚ್ಚಿರ ಸತೀಶ್, ಚೋಕಂಡ ಕುಟ್ಟಪ್ಪ, ಚೋಕಂಡ ಮಂದಪ್ಪ, ಚೋವಂಡ ಮಂದಣ್ಣ, ಕೊಟ್ಟ್ಯಂಡ ಸಂಜು, ಪುಲಿಯಂಡ ಪೊನ್ನಣ್ಣ, ವಾಟೇರಿರ ಬೋಪಣ್ಣ, ಚೋಕಂಡ ಸೂರಜ್ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.