ಪೊನ್ನಂಪೇಟೆಯಲ್ಲಿ ಜೆಸಿಐ ಸಪ್ತಾಹ ‘ಚೈತನ್ಯ’ ಕಾರ್ಯಕ್ರಮಕ್ಕೆ ಚಾಲನೆ

09/09/2020

ಮಡಿಕೇರಿ ಸೆ. 9 : ಜೆಸಿಐ ಪೊನ್ನಂಪೇಟೆ ಜೆಸಿಐ ಗೋಲ್ಡನ್ ವತಿಯಿಂದ ಸೆ. 15ರ ವರೆಗೆ ನಡೆಯಲಿರುವ ಜೆಸಿಐ ಸಪ್ತಾಹ ‘2020 ಚೈತನ್ಯ’ ಕಾರ್ಯಕ್ರಮಕ್ಕೆ ಪೊನ್ನಂಪೇಟೆ ಮುಖ್ಯ ಠಣಾಧಿಕಾರಿ ಕೆ. ಕುಮಾರ್ ಚಾಲನೆ ನೀಡಿದರು.
ಪೊನ್ನಂಪೇಟೆಯ ಬಸ್ಸ್ ನಿಲ್ದಾಣದಲ್ಲಿ ಜೆಸಿ ಗಯ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರದಲ್ಲಿ ಆಟೋ ಚಾಲಕರಿಗೆ, ಸಾರ್ವಜನಿಕರಿಗೆ, ಗ್ರಾಮ ಪಂಚಾಯಿತಿ, ಅಂಚೆ ಕಚೇರಿ ಹಾಗೂ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್ ವಿತರಿಸಲಾಯಿತು.
ಕಾರ್ಯಕ್ರದಲ್ಲಿ ಜೆಸಿಐ ಸದಸ್ಯರುಗಳಾದ ಜೆಸಿ ಎಂ.ಎಂ. ಅಶೋಕ್, ಜೆಸಿ ಪಿ.ಬಿ. ನಟೇಶ್, ಜೆಸಿ ದಿಲನ್ ಚಂಗಪ್ಪ, ಜೆಸಿ ಪಿಪಿ ಪವನ್, ಜೆಸಿ ದಾಟು ಪೂವಯ್ಯ, ರಾಬೀನ್ ಸುಬ್ಬಯ್ಯ, ಎ.ಟಿ. ಮುಖೇಶ್, ನಿರನ್ ಮೊಣ್ಣಪ್ಪ, ಕಂಜಿಯಂಡ ಸಂಜು, ರಾಜ ಸುಬ್ಬಯ್ಯ, ಬಿ.ಕೆ. ನವನೇಶ್, ಸಿ.ಕೆ. ರಘು ತಿಮ್ಮಯ್ಯ, ಸುಜಯ್ ಬೋಪಯ್ಯ, ಸತೀಶ್, ಎಂ.ಟಿ. ಡಿಮ್ಸ್, ಸುಜು ಕರುಂಬಯ್ಯ, ಕೆ.ಎಸ್. ಮೊಣ್ಣಪ್ಪ, ಕೆ.ಎ. ಗಿರಿ, ಉತ್ತಪ್ಪ ಸೇರಿದಂತೆ ಮತ್ತಿತರ ಸದಸ್ಯರು ಹಾಜರಿದ್ದರು.