ಶನಿವಾರಸಂತೆಯಲ್ಲಿ ಅನಾಥ ವೃದ್ಧೆಯ ರಕ್ಷಣೆ

09/09/2020

ಮಡಿಕೇರಿ ಸೆ. 9 : ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಾಸವಿದ್ದ ಅನಾಥ ವೃದ್ಧೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ಘಟಕದ ಕಾರ್ಯಕರ್ತರು ರಕ್ಷಣೆಮಾಡಿ ತನಲ್ ಕೂರ್ಗ್ ಅನಾಥಶ್ರಮಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕರವೇ ಕಾರ್ಯಕರ್ತರು ವೃದ್ಧೆಯನ್ನು ಶುಚಿಗೊಳಿಸಿ ಶನಿವಾರಸಂತೆ ಗ್ರಾ. ಪಂ. ಸದಸ್ಯರು ಹಾಗೂ ಪೊಲೀಸ್ ಠಾಣಾಧಿಕಾರಿಗಳ ಸಹಕಾರದಿಂದ ಕೊವೀಡ್ ಪರೀಕ್ಷೆ ನಡೆಸಿ ವೃದ್ಧೆಯನ್ನು ಆಶ್ರಮಕ್ಕೆ ಬಿಟ್ಟರು.
ಈ ಸಂದರ್ಭ ಶನಿವಾರಸಂತೆ ಗ್ರಾ. ಪಂ. ಸದಸ್ಯ ಎಸ್. ಎನ್. ಪಾಂಡು, ಕರವೇ ತಾಲ್ಲೂಕು ಅಧ್ಯಕ್ಷ ಪ್ರಾಸಿಸ್ ಡಿಸೋಜ, ಕಾರ್ಯಕರ್ತರಾದ ರಕ್ಷಿತ್, ರಂಜಿತ್, ಮೋಹನ್, ಸ್ಥಳೀಯರಾದ ಸುರೇಶ ಪಂಡಿತ್, ಚಂದ್ರು ಮತ್ತಿತರರು ಇದ್ದರು.