ಕೊಡಗಿನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆ

September 9, 2020

ಮಡಿಕೇರಿ ಸೆ.9 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಈ ದಿನ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25 ಕ್ಕೇರಿದೆ.  ವಿವರ ಕೆಳಕಂಡಂತಿದೆ. 
ಸೋಮವಾರಪೇಟೆ ತಾಲ್ಲೂಕು, ಕುಶಾಲನಗರ ಹೋಬಳಿ, ರಂಗಸಮುದ್ರ ಗ್ರಾಮದ ಕಬ್ಬಿನಗದ್ದೆ ನಿವಾಸಿ 48 ವರ್ಷದ ಪುರುಷರೊಬ್ಬರಿಗೆ ದಿನಾಂಕ:04-09-2020 ರಂದು ಜ್ವರ ಕಾಣಿಸಿಕೊಂಡಿದ್ದು, ದಿನಾಂಕ:07-09-2020 ರಂದು ಉಸಿರಾಟದ ತೊಂದರೆ ಮತ್ತು ಸುಸ್ತು ಕಾಣಿಸಿಕೊಂಡಿದ್ದರಿಂದ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಂಡಿರುತ್ತಾರೆ.  ದಿನಾಂಕ:07-09-2020 ರಂದು ಮಧ್ಯರಾತ್ರಿ ತೀವ್ರ ಉಸಿರಾಟದ ತೊಂದರೆ, ಸುಸ್ತು ಮತ್ತು ಎದೆನೋವು ಕಾಣಿಸಿಕೊಂಡಿದ್ದರಿಂದ 2.00 ಗಂಟೆಗೆ  ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆ ನಡೆಸಲಾಗಿ ಕೋವಿಡ್ ಸೋಂಕು  ತಗುಲಿರುವುದು ದೃಢಪಟ್ಟಿರುತ್ತದೆ. 
ಇವರಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಇವರನ್ನು ಐ.ಸಿ.ಯುನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದ್ದು, ಈ ದಿನ ದಿನಾಂಕ:09-09-2020 ರಂದು ಬೆಳಗ್ಗಿನ ಜಾವ 4.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ತಾರೆ. 

error: Content is protected !!