ಮರಾಠ ಮೀಸಲಾತಿ ಅನ್ವಯಿಸುವುದಿಲ್ಲ

10/09/2020

ನವದೆಹಲಿ ಸೆ.10 : ಮಹಾರಾಷ್ಟ್ರದಲ್ಲಿ ಉದ್ಯೋಗ ಶಿಕ್ಷಣಕ್ಕೆ ಮರಾಠ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ ಮರಾಠರಿಗೆ ಮೀಸಲಾತಿಯನ್ನು ನೀಡುವ ಮಹಾರಾಷ್ಟ್ರ ಕಾನೂನನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಉನ್ನತ ಪೀಠಕ್ಕೆ ವರ್ಗಾವಣೆ ಮಾಡಿದೆ.
ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಉನ್ನತ ಪೀಠದಲ್ಲಿರಬೇಕಾದ ಸದಸ್ಯರು ಹಾಗೂ ಇನ್ನಿತರ ವಿವರಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಅರವಿಂದ್ ಎಸ್ ಬೋಬ್ಡೆ ಅವರು ನಿರ್ಧರಿಸಲಿದ್ದಾರೆ ಎಂದು ನ್ಯಾ. ಎಲ್ ನಾಗೇಶ್ವರ್ ರಾವ್ ಅವರ ನೇತೃತ್ವದ ಪೀಠ ತಮ್ಮ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
2020-21 ರಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕವಾಗಿ ಮರಾಠ ಮೀಸಲಾತಿ ಲಭ್ಯವಿರುವುದಿಲ್ಲ, ಸ್ನಾತಕೋತ್ತರ ಪದವಿ ಕೋರ್ಸ್ ಗಳ ದಾಖಲಾತಿಯಲ್ಲಿ ಯಥಾ ಸ್ಥಿತಿ ಇರಲಿದೆ, ಯಾವುದೇ ಬದಲಾವಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.