ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಸದಸ್ಯರಿಗೆ ಸಸಿಗಳ ವಿತರಣೆ

ಮಡಿಕೇರಿ.ಸೆ.10 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವನಮಹೋತ್ಸವ ಯೋಜನೆಯನ್ವಯ ಸದಸ್ಯರಿಗೆ 4 ಸಾವಿರ ಸಸಿಗಳನ್ನು ವಿತರಿಸಲಾಯಿತು.
ಈ ವರ್ಷದ ರೋಟರಿ ಜಿಲ್ಲಾ ಯೋಜನೆಯಂತೆ ಸಸಿ ನೆಡುವಿಕೆಗೆ ಆದ್ಯತೆ ನೀಡಲಾಗಿದ್ದು, ಅದರಂತೆ ರೋಟರಿ ಸದಸ್ಯರಿಗೆ ವಿವಿಧ ಜಾತಿಯ ಸಸಿಗಳನ್ನು ನೀಡಲಾಯಿತು. ಅರಣ್ಯ ಇಲಾಖೆಯ ವನದಲ್ಲಿ ಬೆಳೆದ ಶ್ರೀಗಂಧ, ಹೆಬ್ಬೇವು, ತೇಗ, ಮಹಾಗನಿ, ಸಂಪಿಗೆ, ಸಿಲ್ವರ್, ಬೇಲ, ಹೊಳೆಮತ್ತಿ, ಸೀಬೆ, ಬಿದಿರು, ಬಿಲ್ವಪತ್ರೆ, ಸೇರಿದಂತೆ ಹಲವಾರು ತಳಿಗಳ ಸಸಿಗಳನ್ನು ಮಿಸ್ಟಿ ಹಿಲ್ಸ್ ಸದಸ್ಯರೊಂದಿಗೆ ಜಿಲ್ಲೆಯ ವಿವಿಧ ರೋಟರಿಕ್ಲಬ್ ಗಳ ಸದಸ್ಯರಿಗೂ ವಿತರಿಸಲಾಯಿತು ಎಂದು ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಸತೀಶ್ ಸೋಮಣ್ಣ ಮತ್ತು ಯೋಜನಾ ಕಾರ್ಯದರ್ಶಿ ಎಂ.ಪಿ.ನಾಗರಾಜ್ ತಿಳಿಸಿದ್ದಾರೆ.
ಭೂಕುಸಿತಕ್ಕೆ ಒಳಗಾಗಿದ್ದ ಎರಡನೇ ಮೊಣ್ಣಂಗೇರಿಯಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ಸಾವಿರಾರು ಸಸಿಗಳನ್ನು ಬೆಳೆಸುವ ಯೋಜನೆಯನ್ನು ಸದ್ಯದಲ್ಲಿಯೇ ಅನುಷ್ಟಾನಗೊಳಿಸಲಾಗುತ್ತದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ.ಸಂದೀಪ್ ಮಾಹಿತಿ ತಿಳಿಸಿದ್ದಾರೆ.
