ಪೊನ್ನಂಪೇಟೆಯಲ್ಲಿ ನೀರಿನ ಮಿತ ಬಳಕೆ ಕುರಿತು ಜೆಸಿಐ ಜಾಗೃತಿ

ಮಡಿಕೇರಿ ಸೆ.10 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಜೆಸಿಐ ಸಪ್ತಾಹ- 2020 ‘ಚೈತನ್ಯ’ ಕಾರ್ಯಕ್ರಮದ ಎರಡನೇ ದಿನವಾದ ಇಂದು ನೀರಿನ ಮಿತ ಬಳಕೆ ಅಭಿಯಾನದಡಿ ಪೊನ್ನಂಪೇಟೆಯ ಶ್ರೀಬಸವೇಶ್ವರ ದೇವಾಲಯಕ್ಕೆ ಶುದ್ಧ ಕುಡಿಯುವ ನೀರಿನ ಫಿಲ್ಟರನ್ನು ನೀಡಲಾಯಿತು.
ಜೆಸಿಐ ಗೋಲ್ಡನ್ ಘಟಕದ ಅಧ್ಯಕ್ಷ ಜೆ.ಸಿ ಗಯಾ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಸ್.ಕಾಂತರಾಜು ಹಾಗೂ ಅರ್ಚಕÀ ನಾಗರಾಜ ಭಟ್ ಅವರಿಗೆ ನೀರಿನ ಫಿಲ್ಟರನ್ನು ಹಸ್ತಾಂತರಿಸಲಾಯಿತು.
ನಂತರ ಜೆಸಿಐ ಅಧ್ಯಕ್ಷರು ಹಾಗೂ ಸದಸ್ಯರು ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲಿನ ಹೊಟೇಲ್, ಬಸ್ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಜೆಸಿ ಸದಸ್ಯರುಗಳಾದ ಜೆಸಿ ಎಂ.ಎಂ.ಅಶೋಕ್, ಜೆಸಿ ದಿಲನ್ ಚಂಗಪ್ಪ, ಜೆಸಿ ಸುಜು ಕರುಂಬಯ್ಯ, ಜೆಸಿ ರಾಬಿನ್ ಸುಬ್ಬಯ್ಯ, ಜೆಸಿ ಪಿ.ಪಿ.ಪವನ್, ಜೆಸಿ ಎಂ.ಟಿ. ದಿನ್ಸು, ಜೆಸಿ ಪವಿ ಪೊನ್ನಪ್ಪ, ಜೆಸಿ ಎ.ಟಿ. ಮುಖೇಶ್, ಜೆಸಿ ಕಾವ್ಯ ಸಂಜು ಹಾಜರಿದ್ದರು.