ಎಪಿಎಂಸಿ ಶುಲ್ಕ ನಿಗದಿ : ಅ.9 ರೊಳಗೆ ಆಕ್ಷೇಪಣೆ ಸಲ್ಲಿಸಬಹುದು

ಮಡಿಕೇರಿ ಸೆ.10 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕವನ್ನು ಮಾರ್ಪಾಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರುಕಟ್ಟೆ ಶುಲ್ಕ ಶೇ.0.35 ಕ್ಕೆ ನಿಗಧಿಪಡಿಸಿ ಮತ್ತು ಒಣದ್ರಾಕ್ಷಿ ಉತ್ಪನ್ನಕ್ಕೆ ಹಾಲಿ ಇರುವ ಶೇ.0.10 ನ್ನು ಮುಂದುವರೆಸಿ ಆದೇಶಿಸಿದೆ.
ಆದ್ದರಿಂದ ಒಣದ್ರಾಕ್ಷಿ ಉತ್ಪನ್ನಕ್ಕೆ ಹಾಲಿ ಇರುವ ಶೇ.0.10 ನ್ನು ಮುಂದುವರೆಸಿ, ಹೂವು, ಹಣ್ಣು, ಎಲ್ಲಾ ತರಕಾರಿ ಹಾಗೂ ಉಳಿದ ಎಲ್ಲಾ ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಶೇ.0.35 ರಂತೆ ಮಾರುಕಟ್ಟೆ ಶುಲ್ಕವನ್ನು ಆಕರಣೆ ಮಾಡುವ ಸಂಬಂಧ ಪ್ರಸ್ತುತ ಇರುವ ಉಪನಿಯಮಗಳಲ್ಲಿ ತಿದ್ದುಪಡಿ ಮಾಡಿ ಅಳವಡಿಸಿಕೊಳ್ಳಬೇಕಿರುವುದರಿಂದ ಸಮಿತಿಯ ಎಲ್ಲಾ ಪೇಟೆ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಈ ಉಪನಿಯಮಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳು ಇದ್ದಲ್ಲಿ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಾರ್ಯದರ್ಶಿ ಅವರಿಗೆ ಅಕ್ಟೋಬರ್, 9 ರ ಸಂಜೆ 5 ಗಂಟೆಯೊಳಗೆ ಲಿಖಿತವಾಗಿ ಸಲ್ಲಿಸಬೇಕು. ನಂತರ ಬರುವ ಯಾವುದೇ ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ತಿಳಿಸಿದ್ದಾರೆ.