ಕೊಡಗಿನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿಕೆ

10/09/2020

ಮಡಿಕೇರಿ ಸೆ.10 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಈ ದಿನ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ. ವಿವರ ಕೆಳಕಂಡಂತಿದೆ.  
ಮಡಿಕೇರಿ ನಗರದ ಗೌಡ ಸಮಾಜದ ಬಳಿಯ ನಿವಾಸಿ 90 ವರ್ಷದ ಪುರುಷರೊಬ್ಬರು, ಈ ಹಿಂದಿನಿಂದಲೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ದಿನಾಂಕ:31-08-2020 ರಂದು ಅವರ ಕಾಲು ಮತ್ತು ಹೊಟ್ಟೆ ಊತಗೊಂಡಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 
ದಿನಾಂಕ:01-09-2020 ರಂದು ಖಾಸಗಿ ಆಸ್ಪತ್ರೆಯಿಂದಲೇ ಅವರ ಗಂಟಲು/ಮೂಗು ದ್ರವ ಮಾದರಿಯನ್ನು ತೆಗೆದು ಕೋವಿಡ್ ಪರೀಕ್ಷೆಯನ್ನು ಮಾಡಿಸಲಾಗಿದ್ದು, ದಿನಾಂಕ:02-09-2020 ರಂದು ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.  ತಕ್ಷಣವೇ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಐ.ಸಿ.ಯು ನಲ್ಲಿ ಚಿಕಿತ್ಸೆ ಮುಂದುವರೆಸಿದ್ದು, ಈ ದಿನ ದಿನಾಂಕ:10-09-2020 ರಂದು ಬೆಳಿಗ್ಗೆ 9.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. 
ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ  ನಡೆಸಲಾಗಿದೆ.