ಮಹಾಮಳೆಯಿಂದ ಕೊಡಗಿನ 115 ಗ್ರಾಮಗಳಿಗೆ ಹಾನಿ

10/09/2020

ಮಡಿಕೇರಿ : ಜಿಲ್ಲೆಯ 3 ತಾಲ್ಲೂಕುಗಳ 115 ಗ್ರಾಮಗಳು ಮಹಾಮಳೆಯಿಂದ ಹಾನಿಗೊಳಗಾಗಿವೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ, ಸೇತುವೆ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಎಂಜಿನಿಯರಿಂಗ್ ವಿಭಾಗದಿಂದ 600 ಕೋಟಿ ರೂ. ಮೂಲ ಸೌಕರ್ಯ ಹಾನಿ ಅಂದಾಜಿಸಲಾಗಿದೆ. ಕೃಷಿ, ತೋಟಗಾರಿಕೆ ಸೇರಿದಂತೆ 41 ಸಾವಿರ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.