ಜಲ ಮರು ಬಳಕೆಗೆ ಅದ್ಯತೆ

11/09/2020

ಬೆಂಗಳೂರು ಸೆ.11 : ತ್ಯಾಜ್ಯ ನೀರು ಕೆರೆ-ಕಟ್ಟೆಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಗಟ್ಟಬೇಕಾಗಿದ್ದು, ಜಲಮರುಪೂರಣ, ಜಲ ಮರು ಬಳಕೆಗೆ ಅದ್ಯತೆ ನೀಡಬೇಕಾಗಿದೆ. ಇಂತಹ ಕ್ರಮದಿಂದ ಜಲ ಮೂಲಗಳ ಸಂರಕ್ಷಣೆ ಸಾಧ್ಯವಾಗಲಿದ್ದು, ಪ್ರಕೃತಿಯ ಸಂರಕ್ಷಣೆ ಮಾಡಲು ಸಹಕಾರಿಯಾಗುವ ಮಹತ್ವದ ಉದ್ದೇಶದಿಂದ ಮಧ್ಯಂತರ ತ್ಯಾಜ್ಯ ನೀರು ರೇಚಕ ಸ್ಥಾವರ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ರಾಷ್ಟ್ರೀಯ ಕ್ರೀಡಾ ಗ್ರಾಮ, ಕೋರಮಂಗಲದಲ್ಲಿ ಹೊಸದಾಗಿ ನಿರ್ಮಿಸಿರುವ 210 ದ.ಲ.ಲೀ ಸಾಮಥ್ರ್ಯದ ಮಧ್ಯಂತರ ತ್ಯಾಜ್ಯ ನೀರು ರೇಚಕ ಸ್ಥಾವರ ಉದ್ಘಾಟಿಸಿ ಮಾತನಾಡಿದ ಅವರು, ಈ ವ್ಯಾಪ್ತಿಯಲ್ಲಿ ಬರುವಂತಹ ಕೆರೆಗಳು ಇನ್ನಷ್ಟು ಮಲಿನಗೊಳ್ಳುವುದನ್ನು ತಪ್ಪಿಸಲು ಸಹಕಾರಿಯಾಗಿವೆ ಎಂದರು.