ಸೋಮವಾರಪೇಟೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಹತ್ ಸಮಿತಿ ಸಭೆ

September 11, 2020

ಮಡಿಕೇರಿ: ಕರ್ನಾಟಕ ಮುಸ್ಲಿಂ ಜಮಾಅತ್ ನ ಸೋಮವಾರಪೇಟೆ ತಾಲೂಕು ಸಮಿತಿಯ ಪ್ರಥಮ ಕಾರ್ಯಕಾರಿಣಿ ಸಭೆ ಏಳನೇ ಹೊಸಕೋಟೆಯ ಶಾದಿ ಮಹಲ್ ನಲ್ಲಿ ಸಮಿತಿಯ ಅಧ್ಯಕ್ಷರಾದ ಪಿಎಂ ಅಬ್ದುಲ್ ಲತೀಫ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಿತಿಯ ಉಪಾಧ್ಯಕ್ಷರಾದ ಜನಾಬ್ ನೌಶಾಧ್ ಝುಹರಿರವರು ಪ್ರಾರ್ಥನೆ ನೆರವೇರಿಸಿದರು . ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಜಾಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸೋಮವಾರಪೇಟೆ, ಕುಶಾಲನಗರ ,ಸುಂಟಿಕೊಪ್ಪ ಮೂರು ಪ್ರಮುಖ ಪಟ್ಟಣಗಳನ್ನು ಗುರುತಿಸಿ ,ಹೊಸದಾಗಿ ಬ್ಲಾಕ್ ಅನ್ನು ಮಾಡಿ ಸಮಿತಿಯನ್ನು ರಚನೆ ಮಾಡುವಂತೆ ತೀರ್ಮಾನಿಸಲಾಯಿತು. ಸೆಪ್ಟೆಂಬರ್ 17 ರಂದು ಸುಂಟಿಕೊಪ್ಪ ಬ್ಲಾಕ್, 24ರಂದು ಸೋಮವಾರಪೇಟೆ ಬ್ಲಾಕ್ ಹಾಗೂ ಅಕ್ಟೋಬರ್ 01 ರಂದು ಕುಶಾಲನಗರ ಬ್ಲಾಕ್ ಸಭೆಯನ್ನು ನಡೆಸುವಂತೆ ನಿರ್ಧರಿಸಲಾಯಿತು.
ಪ್ರತಿ ಮೊಹಲ್ಲಾದಲ್ಲಿ ನಮ್ಮ ಯುವಕರು ಮಾದಕವಸ್ತುವಿನ ಅಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮೊಹಲ್ಲ ದಲ್ಲೂ ಜಾಗೃತಿಯನ್ನುಂಟು ಮಾಡುವಂತೆ ಸಮಿತಿಯ ಅಧ್ಯಕ್ಷರು ,ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಳುಗೋಡು ಜಮಾಹತಿನ ಬಡ ಹೆಣ್ಣುಮಗಳ ವಿವಾಹಕ್ಕೆ ಸಮಿತಿ ವತಿಯಿಂದ ಧನಸಹಾಯವನ್ನು ಒದಗಿಸಿಕೊಡುವಂತೆ ತೀರ್ಮಾನಿಸಲಾಗಿದೆ .ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ವಿಭಿನ್ನ ಮತ್ತು ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡುವ ದಿಸೆಯಲ್ಲಿ ಸಮಿತಿಯ ಎಲ್ಲಾ ಸದಸ್ಯರ ಸಹಕಾರ ನೀಡಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಹತ್ ಸೋಮವಾರಪೇಟೆ ತಾಲ್ಲೂಕು ಸಮಿತಿ ಅಧ್ಯಕ್ಷ ಪಿ.ಎಂ‌ ಲತೀಫ್ ಕರೆ ನೀಡಿದರು.

error: Content is protected !!