ಕೊಡಗಿನಲ್ಲಿ ಸೋಂಕಿತ ಸಂಖ್ಯೆ 1915ಕ್ಕೆ ಏರಿಕೆ

September 11, 2020

ಮಡಿಕೇರಿ ಸೆ.11 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 14 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 13 ಸೇರಿದಂತೆ 27 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಶ್ರೀಮಂಗಲ ನೆಮ್ಮಲೆಯ ಕೆಕೆಆರ್ ಅಂಚೆ ಕಚೇರಿ ಬಳಿಯ 30 ವರ್ಷದ ಪುರುಷ, ವಿರಾಜಪೇಟೆ ಹುದಿಕೇರಿಯ ಆಟೋ ನಿಲ್ದಾಣ ಸಮೀಪದ 21 ವರ್ಷದ ಮಹಿಳೆ, ಮಡಿಕೇರಿ ಅಶ್ವಿನಿ ಆಸ್ಪತ್ರೆ ಹಿಂಭಾಗದ ಕೆ.ಎಸ್.ಆರ್.ಟಿ.ಸಿ ವಸತಿಗೃಹದ 52 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗಾಳಿಬೀಡಿನ 3ನೇ ಮೈಲ್ ಶಾಲೆ ಬಳಿಯ 57 ವರ್ಷದ ಮಹಿಳೆ, ವಿರಾಜಪೇಟೆ ಕೋತೂರುವಿನ ಅಯ್ಯಪ್ಪ ದೇವಾಲಯ ಸಮೀಪದ 28 ವರ್ಷದ ಮಹಿಳೆ, ಮಡಿಕೇರಿ ಪುಟಾಣಿ ನಗರದ 47 ಮತ್ತು 21 ವರ್ಷದ ಮಹಿಳೆಯರು, ಕುಶಾಲನಗರ ಬಿಎಂ ರಸ್ತೆಯ 45 ವರ್ಷದ ಪುರುಷ, ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ವಾರ್ತಾ ಭವನ ಸಮೀಪದ 65 ವರ್ಷದ ಪುರುಷ, ಪಾಲಿಬೆಟ್ಟ ಕಲ್ಲುಕೋರೆಯ 11 ವರ್ಷದ ಬಾಲಕ, ವಿರಾಜಪೇಟೆ ಪಾಲಿಬೆಟ್ಟದ ಊರುಕೊಪ್ಪಲುವಿನ 20 ವರ್ಷದ ಪುರುಷ, ವಿರಾಜಪೇಟೆ ಬಲ್ಯಮಂದೂರುವಿನ ಬಸ್ ನಿಲ್ದಾಣ ಸಮೀಪದ 65 ವರ್ಷದ ಮಹಿಳೆ ಮತ್ತು 69 ವರ್ಷದ ಪುರುಷ, ಪಾಲಿಬೆಟ್ಟ ಬಳಿಯ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರ ಮುಳ್ಳುಸೋಗೆಯ ಜನತಾ ಕಾಲೋನಿ 3ನೇ ಬೀದಿಯ 39 ವರ್ಷದ ಮಹಿಳೆ, ಸುಂಟಿಕೊಪ್ಪ ಕಂಬಿಬಾಣೆಯ ಚಿಕ್ಲಿ ಜಲಾಶಯ ರಸ್ತೆ ಸಮೀಪದ 39 ವರ್ಷದ ಪುರುಷ, ವಿರಾಜಪೇಟೆ ಬಿರುನಾಣಿ ಬೈಪಾಸ್ ರಸ್ತೆಯ ಹೈಸೊಡ್ಲೂರು ಗ್ರಾಮ ಮತ್ತು ಅಂಚೆಯ 82 ವರ್ಷದ ಮಹಿಳೆ, ವಿರಾಜಪೇಟೆ ಕಾನೂರುವಿನ ವಿಜಯ ಬ್ಯಾಂಕಿನ ನವೀನ್ ಹೊಟೇಲ್ ಸಮೀಪದ 55 ವರ್ಷದ ಪುರುಷ.
ವಿರಾಜಪೇಟೆ ಗೋಣಿಕೊಪ್ಪದ ಕೈಕೇರಿ ಗ್ರಾಮದ ಬೈಪಾಸ್ ರಸ್ತೆಯ 40 ವರ್ಷದ ಮಹಿಳೆ, ವಿರಾಜಪೇಟೆ ಗೋಣಿಕೊಪ್ಪದ ಕಾವೇರಿ ಹಿಲ್‍ನ ಸಂತ ಥಾಮಸ್ ಶಾಲೆ ರಸ್ತೆಯ 47 ವರ್ಷದ ಪುರುಷ, ವಿರಾಜಪೇಟೆ ಹುಂಡಿ ಗ್ರಾಮದ ಬಾಣಂಗಾಲ ಬಾಡಗದ 58 ವರ್ಷದ ಪುರುಷ, ಸೋಮವಾರಪೇಟೆ ತಾಕೇರಿ ಬಾಳಗದ್ದೆ ಸಮೀಪದ 48 ವರ್ಷದ ಮಹಿಳೆ, ಸೋಮವಾರಪೇಟೆ ಐಗೂರುವಿನ ಗುಳಿಗೊಪ್ಪ ದೇವಾಲಯ ಸಮೀಪದ 27 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆಯ ಕುವೆಂಪು ಲೇಔಟಿನ 29 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ವಾರ್ತಾ ಭವನ ಸಮೀಪದ 47 ವರ್ಷದ ಪುರುಷ, ವಿರಾಜಪೇಟೆ ಮಾಲ್ದಾರೆ ಅಂಚೆಯ ಚೆನ್ನಯ್ಯನಕೋಟೆಯ ಗುಡ್ಲೂರು ಚೆನ್ನಂಗಿಯ 70 ವರ್ಷದ ಪುರುಷ, ಮಡಿಕೇರಿ ದೇಚೂರಿನ ವಿದ್ಯಾ ಗಣಪತಿ ದೇವಾಲಯ ಸಮೀಪದ 17 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1915 ಆಗಿದ್ದು, 1531 ಮಂದಿ ಗುಣಮುಖರಾಗಿದ್ದಾರೆ. 358 ಸಕ್ರಿಯ ಪ್ರಕರಣಗಳಿದ್ದು, 26 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 331 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.