ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ವೀಲ್ ಚೇರ್ ಕೊಡುಗೆ
12/09/2020

ಮಡಿಕೇರಿ ಸೆ.11 : ಸಮನ್ವಯ ಶಿಕ್ಷಣಕ್ಕೆ ಒಳಪಡುವ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಾದ ಸರ್ಕಾರಿ ಪ್ರೌಢಶಾಲೆ ಹಾಕತ್ತೂರುವಿನ 8 ನೇ ತರಗತಿಯ ವಿದ್ಯಾರ್ಥಿನಿ ರಾಹಿಲ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಪೆರಾಜೆ ವಿದ್ಯಾರ್ಥಿ ಜೀವನ್ ಎಂ.ಎ, ಇವರಿಗೆ ನಗರದ ಬಿಆರ್‍ಸಿ ಕೇಂದ್ರದಲ್ಲಿ ಅನಂದೂರು ಶೇಷಯ್ಯ ಲಕ್ಷ್ಮೀದೇವಮ್ಮ ಮತ್ತು ಕಾಶ್ಯಪ್ ಅಸೋಸಿಯೇಟ್ಸ್” ದತ್ತಿ ನಿಧಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ವ್ಹೀಲ್’ಚೇರ್ ನೀಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಭಾಗಿತ್ವದಲ್ಲಿ ಹಂಚಿಕೆ ಮಾಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯಿತ್ರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಬಿಆರ್‍ಪಿ, ಬಿಐಇಆರ್‍ಟಿ, ಶಿಕ್ಷಣ ಸಂಯೋಜಕರು, ಸಿಆರ್‍ಪಿ ಮಡಿಕೇರಿ ತಾಲೂಕು ರಾಮಚಂದ್ರ ಕೆ.ಎ ಇತರರು ಈ ಸಂದರ್ಭ ಹಾಜರಿದ್ದರು.
