16,000 ಕೋಟಿಯಲ್ಲಿ ಬಿಹಾರ ಅಭಿವೃದ್ಧಿ

September 12, 2020

ಪಾಟ್ನಾ ಸೆ.12 : ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಂದಿನ 10 ದಿನಗಳಲ್ಲಿ 16,000 ಕೋಟಿ ರೂ.ಗಳ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಲಿದ್ದಾರೆ. ಈ ಬಹು ವಿಧದ ಯೋಜನೆಗಳು ಬಿಹಾರದ ಜನರಿಗೆ ಮೂಲಸೌಕರ್ಯ ಹಾಗೂ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳ ಸುಧಾರಣೆಯಾಗುವಂತೆ ಮಾಡಲಿದೆ.
ಎಲ್ಪಿಜಿ ಪೈಪ್ಲೈನ್, ಎಲ್ಪಿಜಿ ಬಾಟ್ಲಿಂಗ್ ಸ್ಥಾವರ, ನಮಾಮಿ ಗಂಗೆ ಅಡಿಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕ, ನೀರು ಸರಬರಾಜು ಯೋಜನೆಗಳು, ನದಿ ತಟದಲ್ಲಿನ ಅಭಿವೃದ್ಧಿ ಯೋಜನೆ, ಹೊಸ ರೈಲ್ವೆ ಮಾರ್ಗ, ರೈಲ್ವೆ ಸೇತುವೆ, ವಿವಿಧ ವಿಭಾಗಗಳ ವಿದ್ಯುದೀಕರಣ ಮತ್ತು ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು, ಹೆದ್ದಾರಿಗಳು ಮತ್ತು ಸೇತುವೆಗಳ ದುರಸ್ತಿ, ನಿರ್ಮಾಣಗಳು ಇದರಲ್ಲಿ ಸೇರಿದೆ.

error: Content is protected !!