ಸಮುದ್ರದಲ್ಲಿದ್ದ 24 ಮೀನುಗಾರರ ರಕ್ಷಣೆ

September 12, 2020

ಮಂಗಳೂರು ಸೆ.12 : ಭಟ್ಕಳ ಬಂದರು ಸಮೀಪ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಕರ್ನಾಟಕ ಕರಾವಳಿ ರಕ್ಷಣಾ ಪಡೆ ಶುಕ್ರವಾರ ರಕ್ಷಿಸಿದೆ.
ಕರ್ನಾಟಕ ಕರಾವಳಿಯಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ ಭಾರತೀಯ ಕರಾವಳಿ ರಕ್ಷಣಾ ಪಡೆ(ಐಸಿಜಿ)ಯ `ಕಸ್ತೂರ್ಬಾ ಗಾಂಧಿ’ ಹಡಗನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಈ ಹಡಗು ಕಳೆದ ರಾತ್ರಿ ಡೇಟಮ್ಗೆ ಆಗಮಿಸಿ ಮೀನುಗಾರರೊಂದಿಗೆ ಸಂವಹನ ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಎಂಜಿನ್ ವೈಫಲ್ಯದಿಂದಾಗಿ ಮೀನುಗಾರಿಕಾ ದೋಣಿ ಅಪಾಯಕ್ಕೆ ಸಿಲುಕಿತ್ತು.
ಮೀನುಗಾರಿಕೆ ಉಪನಿರ್ದೇಶಕರ ಮನವಿಯಂತೆ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಇಂದು ಬೆಳಗ್ಗೆ ಪೂರ್ಣಗೊಂಡಿದೆ.