ಐಪಿಎಲ್ ಬಗ್ಗೆ ರಾಬಿನ್ ಹೇಳಿದ್ದು ಹೀಗೆ

12/09/2020

ದುಬೈ ಸೆ.12 : ಕೊರೋನಾ ಸಾಂಕ್ರಾಮಿಕದ ಮಧ್ಯೆ ಈ ಬಾರಿ ಐಪಿಎಲ್ ಅನಿರೀಕ್ಷಿತ ಸಮಯದಲ್ಲಿ ನಡೆಯುತ್ತಿದ್ದು, ವಿಶೇಷವಾಗಲಿದೆ ಎಂದು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಉತ್ತಪ್ಪ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ಪರ ಬಹು ವರ್ಷ ಆಡಿದ್ದರು. ಆದರೆ ಈ ಬಾರಿ ಅವರು ರಾಜಸ್ಥಾನ ಪರ ಆಡಲಿದ್ದಾರೆ. ಐಪಿಎಲ್ ಸೆ.19 ರಿಂದ ನ.10ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ ಜೈವಿಕ ಸುರಕ್ಷತಾ ಪ್ರೋಟೋಕಾಲ್ ಅಡಿಯಲ್ಲಿ ಪ್ರೇಕ್ಷಕರಿಲ್ಲದೆ ನಡೆಯಲಿದೆ.
ಈ ಬಾರಿಯ ಐಪಿಎಲ್ ಶ್ರೇಷ್ಠ ಋತುವನ್ನು ಕಾಣಲಿದ್ದೇವೆ ಎಂದರು. ನನ್ನ ಪಾಲಿಗೆ ಸುಂದರವಾದ ಸಂದರ್ಭಗಳು ಬರಲಿದೆ. ಅದರ ಜೊತೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಆಶಾಭಾವ ಹೊಂದಿದ್ದೇನೆ ಎಂದರು.
ನಡೆಯುವುದಿಲ್ಲ ಎಂದುಕೊಂಡಿದ್ದ ಐಪಿಎಲ್ ನಡೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಕೊರೋನಾ ಪರಿಸ್ಥಿತಿ ಐಪಿಎಲ್ ಆರಂಭವಾಗುತ್ತಿರುವುದು ಜನರಿಗೂ ಸಾಕಷ್ಟು ನಿರಾಳತೆಯನ್ನು ತರಲಿದೆ. ಇದು ಊಹಿಸಲು ಅಸಾಧ್ಯವಾದಂತಾ ಸಂದರ್ಭ ಎಂದು ರಾಬಿನ್ ಹೇಳಿದ್ದಾರೆ.