ಕೊಡಗಿನಲ್ಲಿ 42 ಹೊಸ ಪ್ರಕರಣ ಪತ್ತೆ : ಐದು ವರ್ಷದ ಬಾಲಕನನ್ನು ಕಾಡಿದ ಕೋವಿಡ್ ಸೋಂಕು

12/09/2020

ಮಡಿಕೇರಿ ಸೆ.12 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 24 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 18 ಸೇರಿದಂತೆ 42 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಸೋಮವಾರಪೇಟೆ ಐಗೂರು ಗ್ರಾಮ ಮತ್ತು ಅಂಚೆಯ ಕೊಡಗರ ಲೈನ್ ಮನು ಎಸ್ಟೇಟಿನ 48 ವರ್ಷದ ಮಹಿಳೆ, ಕುಶಾಲನಗರ ಶಿರಂಗಾಲದ ಮಣಜೂರು ಪೇಟೆ ಬೀದಿ ಸಮೀಪದ 27 ವರ್ಷದ ಮಹಿಳೆ, ಕೊಪ್ಪಲು ನಲ್ಲೂರುವಿನ ಶಿರಂಗಾಲ ಗೇಟ್ ಸಮೀಪದ 50 ವರ್ಷದ ಮಹಿಳೆ, ಕುಶಾಲನಗರ ಶಿರಂಗಾಲ ತೊರೆನೂರುವಿನ ಬೈರಪ್ಪ ಗುಂಡಿ ಸಮೀಪದ 39 ವರ್ಷದ ಪುರುಷ, ವಿರಾಜಪೇಟೆ ಪೆÇನ್ನಪ್ಪ ಸಂತೆಯ 48 ವರ್ಷದ ಪುರುಷ, ನೆಲ್ಲಿಹುದಿಕೇರಿ ಹೊಳಕೇರಿ ಸಮೀಪದ 25 ವರ್ಷದ ಮಹಿಳೆ, ಸೋಮವಾರಪೇಟೆ 7ನೇ ಹೊಸಕೋಟೆಯ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದ 61 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಸಿದ್ದಲಿಂಗಪುರದ 39 ವರ್ಷದ ಪುರುಷ, 31 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ಹನಕಾಡು ಅಂಚೆಯ ದೊಡ್ಡಮಾಲ್ತೆ ಗ್ರಾಮದ 65 ವರ್ಷದ ಪುರುಷ, ಸೋಮವಾರಪೇಟೆ ಹನಸೆ ಬಸವನಕೊಪ್ಪದ 67 ವರ್ಷದ ಪುರುಷ, ಸೋಮವಾರಪೇಟೆ ತಣ್ಣೀರು ಹಳ್ಳದ ಸರ್ಕಾರಿ ಶಾಲೆ ಬಳಿಯ 50 ವರ್ಷದ ಮಹಿಳೆ.
ಸೋಮವಾರಪೇಟೆ ಕೊಡ್ಲೀಪೇಟೆಯ ಬಸವಮ್ಮ ದೇವಾಲಯ ಎದುರಿನ 44 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲು ಅಂಚೆಯ ಕಾವಡಿಕಟ್ಟೆ ಕೈಬೆಟ್ಟ ಗ್ರಾಮದ 35, 60 ವರ್ಷದ ಮಹಿಳೆ. ಮಡಿಕೇರಿ ಪ್ರಕೃತಿ ಬಡಾವಣೆಯ ಕಾವೇರಿ ಹಾಲ್ ಸಮೀಪದ 81 ವರ್ಷದ ಮಹಿಳೆ,ಮಡಿಕೇರಿ ಮುತ್ತಪ್ಪ ದೇವಾಲಯ ಸಮೀಪದ 46 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟಿನ ಎಸ್.ವಿ.ವೈ.ಎಂ ಕಟ್ಟಡ ಸಮೀಪದ 33 ವರ್ಷದ ಮಹಿಳೆ,ವಿರಾಜಪೇಟೆ ಗೋಣಿಕೊಪ್ಪದ ಬೈಪಾಸ್ ರಸ್ತೆಯ 22 ವರ್ಷದ ಮಹಿಳೆ.
ಕುಶಾಲನಗರ ವಿನಾಯಕ ಬಡಾವಣೆಯ 39 ವರ್ಷದ ಪುರುಷ ಮತ್ತು 33 ವರ್ಷದ ಮಹಿಳೆ, ಕುಶಾಲನಗರ ಕುವೆಂಪು ಬಡಾವಣೆಯ 4ನೇ ಬ್ಲಾಕಿನ 76 ವರ್ಷದ ಪುರುಷ, ಕುಶಾಲನಗರ ಬೈಪಾಸ್ ರಸ್ತೆಯ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿ ತಾಳತ್ತಮನೆಯ ಗ್ರೀನ್ ಲೈನ್ ಹೋಂಸ್ಟೇ ಸಮೀಪದ 23 ವರ್ಷದ ಮಹಿಳೆ, ಮಡಿಕೇರಿ ಪುಟಾಣಿನಗರದ 27 ವರ್ಷದ ಮಹಿಳೆ, ಸೋಮವಾರಪೇಟೆ ಚೆಟ್ಟಳ್ಳಿಯ ಕಾಫಿ ಬೋರ್ಡ್ ಸಮೀಪದ 35 ವರ್ಷದ ಪುರುಷ,ಸೋಮವಾರಪೇಟೆ ಎಂಜಿ ರಸ್ತೆಯ ಶಿಲ್ಪಾ ಮಿಲ್ ಸಮೀಪದ 24 ವರ್ಷದ ಪುರುಷ, ಸೋಮವಾರಪೇಟೆ ಒ.ಎಲ್.ವಿ ಕಾನ್ವೆಂಟ್ ಸಮೀಪದ 29 ವರ್ಷದ ಪುರುಷ, ಚೆಟ್ಟಳ್ಳಿ ಸುಂಟಿಕೊಪ್ಪ ರಸ್ತೆಯ ಸರ್ಕಾರಿ ಶಾಲೆ ಸಮೀಪದ 44 ವರ್ಷದ ಮಹಿಳೆ, ಬಸವನಹಳ್ಳಿ ಹಾರಂಗಿ ಹಿನ್ನೀರು ರಸ್ತೆಯ 41 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕ, ಕುಶಾಲನಗರ ಕರಿಯಪ್ಪ ಬಡಾವಣೆಯ 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಣ್ಣೀರು ಹಳ್ಳದ ಬರ್ಗಳ್ಳಿ ಎಸ್ಟೇಟಿನ 70 ವರ್ಷದ ಪುರುಷ, ವಿರಾಜಪೇಟೆ ಪೆÇಲೀಸ್ ವಸತಿಗೃಹದ 26 ಮತ್ತು 57 ವರ್ಷದ ಪುರುಷರು, ಗೋಣಿಕೊಪ್ಪ ಹೊಸೂರು ಗ್ರಾಮ ಕಲತ್ಮಾಡು ಜಿಎಂಪಿ ಶಾಲೆ ಸಮೀಪದ 59 ವರ್ಷದ ಪುರುಷ, ಮಡಿಕೇರಿ ಆಸ್ಪತ್ರೆ ವಸತಿಗೃಹದ 45 ವರ್ಷದ ಪುರುಷ ಮತ್ತು 13 ವರ್ಷದ ಬಾಲಕ, ಮಡಿಕೇರಿ ರಾಣಿಪೇಟೆ ಗೆಜ್ಜೆ ಸಂಗಪ್ಪ ಚೌಲ್ಟ್ರಿ ಸಮೀಪದ 32 ವರ್ಷದ ಪುರುಷ, ಸುಂಟಿಕೊಪ್ಪ ಕಾನ್ ಬೈಲ್ ನ 29 ವರ್ಷದ ಮಹಿಳೆ,ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ವಸತಿಗೃಹದ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1957 ಆಗಿದ್ದು, 1577 ಮಂದಿ ಗುಣಮುಖರಾಗಿದ್ದಾರೆ. 354 ಸಕ್ರಿಯ ಪ್ರಕರಣಗಳಿದ್ದು, 26 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 347 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.