ಜೆಸಿಐ ಸಪ್ತಾಹ : ಶ್ರೀರಾಮಕೃಷ್ಣ ಆಶ್ರಮದಲ್ಲಿ ಯೋಗ ಕಾರ್ಯಕ್ರಮ

September 12, 2020

ಮಡಿಕೇರಿ ಸೆ.12 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ನಡೆಯುತ್ತಿರುವ ಜೆಸಿಐ ಸಪ್ತಾಹ ‘ಚೈತನ್ಯ’ ಕಾರ್ಯಕ್ರಮದ ಮೂರನೇ ದಿನವಾದ ಇಂದು ಪೊನ್ನಂಪೇಟೆಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಜೆಸಿಐ ಘಟಕದ ಅಧ್ಯಕ್ಷ ಗಯ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸಾ ವೈದ್ಯರುಗಳಾದ ಡಾ.ಹಿತೇಶ್ ಹಾಗೂ ಡಾ.ಸ್ಪೂರ್ತಿ ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಜೆಸಿ ಸದಸ್ಯರುಗಳಿಗೆ ಯೋಗ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆಶ್ರಮದ ಸ್ವಾಮೀಜಿ ಶ್ರೀಭೋದಸ್ವರೂಪನಂದ ಅವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳೊಂದಿಗೆ ಪಾಲ್ಗೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭ ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸ್ಟ್ಯಾಂಡ್ ಹಾಗೂ ಸ್ಯಾನಿಟೈಸರ್‍ನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಯಿತು.
ಸದಸ್ಯರುಗಳಾದ ಜೆಸಿ ರಾಜ ಸುಬ್ಬಯ್ಯ, ಜೆಸಿ ಎ.ಟಿ.ಮುಖೇಶ್, ಜೆಸಿ ಎಂ.ಎಂ.ಅಶೋಕ್, ಜೆಸಿ ದಿಲನ್ ಚಂಗಪ್ಪ, ಜೆಸಿ ಎಂ.ಬಿ.ಬೋಪಣ್ಣ, ಜೆಸಿ ಕೆ.ಡಿ.ಸತೀಶ್, ಜೆಸಿ ಪ್ರದೀಪ್ ಪೊನ್ನಿಮಾಡ, ಜೆಸಿ ಪಿ.ಎಸ್.ಉತ್ತಪ್ಪ, ಜೆಸಿ ಸುಜು ಕರುಂಬಯ್ಯ, ಮಹಿತ ಚಂಗಪ್ಪ ಮತ್ತಿತರರು ಹಾಜರಿದ್ದರು.

error: Content is protected !!