ಕೊಡಗಿನಲ್ಲಿ ಕೋವಿಡ್ : ಯುವ ಸೋಂಕಿತರ ಸಂಖ್ಯೆ ಹೆಚ್ಚಳ

September 12, 2020

ಮಡಿಕೇರಿ ಸೆ.12 : ಕೊಡಗಿನಲ್ಲಿ ಶನಿವಾರ ಕೊರೊನಾ ಸೋಂಕಿನ 42 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1957 ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿತರ ಪೈಕಿ 1577 ಮಂದಿ ಗುಣಮುಖರಾಗಿದ್ದಾರೆ. 354 ಸಕ್ರಿಯ ಪ್ರಕರಣಗಳಿದ್ದು, 26 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 347 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
::: ಯುವ ಸೋಂಕಿತರು :::
ಸೋಮವಾರಪೇಟೆ ಸಿದ್ದಲಿಂಗಪುರದ 5 ವರ್ಷದ ಬಾಲಕ, ಮಡಿಕೇರಿ ಆಸ್ಪತ್ರೆ ವಸತಿಗೃಹದ 13 ವರ್ಷದ ಬಾಲಕ, ಹಾರಂಗಿ ಹಿನ್ನೀರು ಪ್ರದೇಶದ 14 ವರ್ಷದ ಬಾಲಕ, ಗೋಣಿಕೊಪ್ಪದ ಬೈಪಾಸ್ ರಸ್ತೆಯ 22 ವರ್ಷದ ಇಬ್ಬರು ಮಹಿಳೆಯರು, ತಾಳತ್ತಮನೆಯ 23 ವರ್ಷದ ಮಹಿಳೆ, ಸೋಮವಾರಪೇಟೆಯ 24 ವರ್ಷದ ಪುರುಷ, ನೆಲ್ಲಿಹುದಿಕೇರಿ ಹೊಳಕೇರಿ ಸಮೀಪದ 25 ವರ್ಷದ ಮಹಿಳೆಯಲ್ಲಿ ಇಂದು ಸೋಂಕು ದೃಢಪಟ್ಟಿದೆ.