ಮಡಿಕೇರಿ ಗುಣಭರವಸೆ ಕಚೇರಿ ಸ್ಥಳಾಂತರಿಸದಂತೆ ಲೋಕೋಪಯೋಗಿ ಗುತ್ತಿಗೆದಾರರ ಒತ್ತಾಯ

ಮಡಿಕೇರಿ ಸೆ.12 : ಲೋಕೋಪಯೋಗಿ ಇಲಾಖೆ ಗುಣಭರವಸೆ ಉಪವಿಭಾಗದ ಮಡಿಕೇರಿ ಕಚೇರಿ ಹಾಗೂ ಪ್ರಯೋಗಾಲಯವನ್ನು ಬೇರೆಡೆಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಕೈಬಿಟ್ಟು ಮಡಿಕೇರಿಯಲ್ಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಬಿ.ಪಿ.ರಾಜೀವ್ ಲೋಚನÀ, ಕಳೆದ ಹಲವು ವರ್ಷಗಳಿಂದ ಈ ಕಚೇರಿ ಮಡಿಕೇರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಕೊಡಗಿನ ಎಲ್ಲಾ ಗುತ್ತಿಗೆದಾರರಿಗೆ ಬಂದು ಹೋಗಲು ಅನುಕೂಲವಾಗುತ್ತಿತ್ತು. ಆದರೆ ಅಧಿಕಾರಿಯೊಬ್ಬರು ತಮ್ಮ ಸ್ವಾರ್ಥಕ್ಕಾಗಿ ಕಚೇರಿ ಮತ್ತು ಪ್ರಯೋಗಾಲಯವನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜಕೀಯ ಪ್ರಭಾವ ಬಳಸಿ ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.
ಸ್ಥಳಾಂತರ ಪ್ರಸ್ತಾಪವನ್ನು ಕೈಬಿಟ್ಟು ಮಡಿಕೇರಿಯಲ್ಲೇ ಕಾರ್ಯನಿರ್ವಹಿಸಲು ಸೂಚಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲಾ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜೀವ್ ಲೋಚನÀ ತಿಳಿಸಿದ್ದಾರೆ.