ಸೋಮವಾರಪೇಟೆಯಲ್ಲಿ ನಾಲ್ವರು ಬೇಟೆಗಾರರ ಬಂಧನ
12/09/2020

ಮಡಿಕೇರಿ : ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ನಾಲ್ವರ ತಂಡವನ್ನು ಸೋಮವಾರಪೇಟೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಹಿರಿಕರ ಗ್ರಾಮದ ನಿವಾಸಿಗಳು ಬಂಧಿತ ಆರೋಪಿಗಳು. ಬಂಧಿತರಿಂದ ಬೇಟೆಯಾಡಲು ಬಳಸಿದ್ದ 10 ಸ್ಫೋಟಕ, 3 ಕೋವಿ ಮತ್ತು 2 ಹೆಡ್ ಲೈಟ್ ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.