ಜೆಡಿಎಸ್ ಸಭೆ : ಅಲ್ಪಸಂಖ್ಯಾತರ ಬೆಂಬಲ ಜೆಡಿಎಸ್ ಪಕ್ಷಕ್ಕಿದೆ : ಇಸಾಕ್ ಖಾನ್ ವಿಶ್ವಾಸ

September 13, 2020

ಮಡಿಕೇರಿ ಸೆ.13 : ಕಾಂಗ್ರೆಸ್ ಮತ್ತು ಬಿಜೆಪಿಯ ಆಡಳಿತ ವೈಖರಿಯಿಂದ ಬೇಸತ್ತಿರುವ ಜನ ಈ ಬಾರಿ ಜಾತ್ಯತೀತ ಜನತಾದಳವನ್ನು ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಹೆಚ್.ಯು.ಇಸಾಕ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಗ್ರಾ.ಪಂ ಮತ್ತು ಮಡಿಕೇರಿ ನಗರಸಭೆ ಚುನಾವಣೆ ಬರಲಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಜಿಲ್ಲೆಯಲ್ಲಿ ಜೆಡಿಎಸ್ ಗೆ ಉತ್ತಮ ಭವಿಷ್ಯವಿದ್ದು, ಎಲ್ಲಾ ಘಟಕಗಳು ನಿಸ್ವಾರ್ಥದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಎಂ.ಷರೀಫ್, ಸಂಘಟನಾ ಕಾರ್ಯದರ್ಶಿ ಮನ್ಸೂರ್ ಅಲಿ, ಜಿಲ್ಲಾ ಖಜಾಂಚಿ ಜಿ.ಡೆನ್ನಿ ಬರೋಸ್, ಹಿರಿಯ ಉಪಾಧ್ಯಕ್ಷ ಮೊಹಿದ್ದೀನ್, ವಿರಾಜಪೇಟೆ ಕ್ಷೇತ್ರ ಅಧ್ಯಕ್ಷ ಮತಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನೀಫ್, ಜಿಲ್ಲಾ ಮುಖಂಡ ಶಬೀರ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಶೀರ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮಜಿದ್ ಚೋಕಂಡಳ್ಳಿ, ನಗರಾಧ್ಯಕ್ಷ ಖಲೀಲ್ ಬಾದ್ ಶಾ, ವಿರಾಜಪೇಟೆ ಮಹಿಳಾ ಅಧ್ಯಕ್ಷೆ ರುಬಿನ ಬಾನು, ಕುಶಾಲನಗರ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕರೀಂ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ಪ್ರಮುಖರಾದ ಅಶ್ರಫ್, ಆಶಿಕ್ ಖಾನ್, ರವಿಕುಮಾರ್, ಮೋಣು, ಕೊಡ್ಲಿಪೇಟೆ ಸುನಂದ, ಲಲಿತಾ, ಕರೀಂ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಲಾಯಿತು.