ಪೊನ್ನಂಪೇಟೆ ಯುವ ಜೆಡಿಎಸ್ ಅಧ್ಯಕ್ಷರಾಗಿ ಜೀವನ್ ಆಯ್ಕೆ
13/09/2020

ಮಡಿಕೇರಿ ಸೆ.13 : ಪೊನ್ನಂಪೇಟೆ ತಾಲ್ಲೂಕು ಯುವ ಜಾತ್ಯತೀತ ಜನತಾದಳದ ಅಧ್ಯಕ್ಷರನ್ನಾಗಿ ಕಾನತಂಡ ಜೀವನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ.
ಯುವ ಜಾತ್ಯತೀತ ಜನತಾದಳವನ್ನು ಕೊಡಗಿನಲ್ಲಿ ಬಲಿಷ್ಠಗೊಳಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇತರ ಪಕ್ಷಗಳಿಂದ ಯುವ ಕಾರ್ಯಕರ್ತರು ಜೆಡಿಎಸ್ ಗೆ ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.