ಸೋಮವಾರಪೇಟೆ ಅರ್ಚಕ ಎಸ್.ಎನ್. ರಮೇಶ್ (ಅಪ್ಪಯ್ಯ) ನಿಧನ

13/09/2020

ಮಡಿಕೇರಿ ಸೆ.13 : ಸೋಮವಾರಪೇಟೆ ಪಟ್ಟಣದ ಬಸವೆಶ್ವರ ರಸ್ತೆ ನಿವಾಸಿ ಅರ್ಚಕ ರಾಗಿದ್ದ ಎಸ್.ಎನ್. ರಮೇಶ್ (ಅಪ್ಪಯ್ಯ) 78 ಇಂದು ಸಂಜೆ ನಿಧನರಾಗಿದ್ದಾರೆ. ಸಂಜೆ ತಮ್ಮ ಮನೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ಮಾರ್ಗಮದ್ಯೆ ಕೊನೆಯುಸಿರೆಳೆದಿದ್ದಾರೆ.ಮೃತರು ನಗರ ಬಿ.ಜೆ.ಪಿ. ಅದ್ಯೆಕ್ಷ ಎಸ್.ಆರ್.ಸೋಮೇಶ್ ಸೇರಿದಂತೆ ಮೂವರು ಮಕ್ಕಳನ್ನು ಹಾಗೂ ಅಪಾರ ಬಂದುಬಳಗವನ್ನಲಿದ್ದಾರೆ.ಮೃತರ ಅಂತ್ಯಕ್ರಿಯೆಯು ನಾಳೆ(ಸೋಮವಾರ)ಬೆ 11.30ಕ್ಕೆ ಕರ್ಕಳ್ಳಿಯಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ.ಅಪ್ಪಯ್ಯನವರು ಕಳೆದ 17 ವರ್ಷಗಳಿಂದ ಸಾರ್ವಜನಿಕ ಗಣಪತಿಯ ಅರ್ಚಕರಾಗಿ ಸೇವೆಸಲ್ಲಿಸಿ ಜನಾನುರಾಗಿಗಳಾಗಿದ್ದರು.