ಸರ್ಕಾರದ ವಿರುದ್ಧ ಸಿದ್ದು ಅಸಮಾಧಾನ

14/09/2020

ಬೆಂಗಳೂರು ಸೆ.14 : ಒಂದು ಕಡೆ ರೈತರ ಅಭಿವೃದ್ಧಿ ಬಗ್ಗೆ ಭಾಷಣ ಬಿಗಿಯುವುದು, ಮತ್ತೊಂದು ಕಡೆ ರೈತ ವಿರೋಧಿ ಕಾಯಿದೆಯನ್ನು ಜಾರಿ ಮಾಡುವುದು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನ ಗಾಂಧಿಭವನದಲ್ಲಿಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬರೆದಿರುವ “ರೈತರ ಭದ್ರತೆ-ದೇಶದ ಭದ್ರತೆ” ಪುಸ್ತಕ ಲೋಕಾರ್ಪಣೆ ಮಾಡಿ ಬಳಿಕ ಸಿದ್ದರಾಮಯ್ಯ ಮಾತನಾಡಿದರು.
ರೈತರನ್ನು ಶೋಷಿಸುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ತರುವುದು ಸರಿಯಲ್ಲ. ಸರ್ಕಾರ ಈಗಾಗಲೇ ಇರುವ ಶೋಷಣೆಯನ್ನು ತಪ್ಪಿಸಬಹುದಿತ್ತು. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿ ಮಾಡಿದೆ. ಬಲವಂತವಾಗಿ ಬಾರ ಹೊರಿಸಿದರೆ ಹೊರಬೇಕಷ್ಟೆ. ಈ ಕಾಯ್ದೆಯಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಕೇಂದ್ರದ ಮುಂದೆ ರಾಜ್ಯ ಸರ್ಕಾರ ಕೋಲೆ ಬಸವನಂತಾಗಿದೆ ಎಂದು ಟೀಕಿಸಿದರು.