ಜಂಬೂ ಸವಾರಿ ಮೆರವಣಿಗೆಗೆ ಒತ್ತಾಯ

September 14, 2020

ಮೈಸೂರು ಸೆ.14 : ನಾಡಹಬ್ಬ ದಸರಾ ಜನರ ಹಬ್ಬವಾಗಬೇಕು. ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಬಾರದು. ಜಂಬೂ ಸವಾರಿ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗದಿದ್ದರೆ ಜಟಕಾ ಗಾಡಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ ಮಾಡುತ್ತೇನೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಮೈಸೂರಿನ ಜಯಚಾಮರಾಜ ವೃತ್ತದಲ್ಲಿ ರಾಜ್ಯ ಸರ್ಕಾರದ ಸರಳ ದಸರಾ ಆಚರಣೆ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ ಅವರು, ನಾಡಹಬ್ಬ ದಸರಾ ಜನರ ಹಬ್ಬವಾಗಬೇಕು. ಮೈಸೂರು ಅರಮನೆಗೆ ಸೀಮಿತವಾಗಿ ದಸರಾ ಆಚರಣೆ ಸಲ್ಲದು. ಕೊರೋನಾ ಸೋಂಕು ನಿಯಂತ್ರಣ ಕ್ರಮಗಳ ನಡುವೆಯು ದಸರಾ ವೈಭವಕ್ಕೆ ಯಾವುದೇ ತೊಂದರೆ ಎದುರಾಗಬಾರದು ಎಂದರು.