ಸೈನಿಕನಿಂದ ಜೀವಂತ ಮದ್ದುಗುಂಡು ವಶ

14/09/2020

ಬೆಳಗಾವಿ ಸೆ.14 : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪೊಲೀಸರು ಭಾನುವಾರ ಬೆಳಿಗ್ಗೆ ಸೈನಿಕನೋರ್ವನನ್ನು ಬಂಧಿಸಿ ಆತನಿಂದ ಎಕೆ-47 ಬಂದೂಕಿನ ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕರ ಬ್ಯಾಗ್‍ಗಳನ್ನು ಪರಿಶೀಲಿಸಿದಾಗ ಸೈನಿಕನ ಲಗ್ಗೇಜ್‍ನಲ್ಲಿ ಒಂದು ಸುತ್ತಿನ ಜೀವಂತ ಮದ್ದುಗುಂಡುಗಳ ಸರಪಳಿ ಮತ್ತು ಬಳಸಿದ ಮದ್ದುಗುಂಡುಗಳ ಪೆಟ್ಟಿಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈನಿಕ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲೆಯೆನ್ಸ್ ಏರ್ ಲೈನ್ಸ್ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಎ.ಕೆ. 47ಗೆ ಬಳಸುವ ಜೀವಂತ ಮದ್ದು ಗುಂಡುಗಳು ಪತ್ತೆಯಾದ ಕಾರಣ ಸೈನಿಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ಎಂಎಲ್ ಐಆರ್ ಸಿಗೆ ಹಸ್ತಾಂತರ ಮಾಡಿದ್ದಾರೆ.