ಜೆಸಿಐ ಸಪ್ತಾಹ : ಪದಾಧಿಕಾರಿಗಳಿಂದ ರಕ್ತದಾನ

14/09/2020

ಮಡಿಕೇರಿ ಸೆ.14 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಜೆಸಿಐ ಸಪ್ತಾಹ ‘ಚೈತನ್ಯ’ ಕಾರ್ಯಕ್ರಮದ 4ನೇ ದಿನವಾದ ಇಂದು ರಕ್ತದಾನ ಕಾರ್ಯಕ್ರಮ ನಡೆಯಿತು.
ಜೆಸಿಐ ಗೋಲ್ಡನ್ ಘಟಕದ ಅಧ್ಯಕ್ಷ ಗಯ ಜೋಯಪ್ಪ, ಸದಸ್ಯರುಗಳಾದ ಜೆಸಿ ಸುಜು ಕರುಂಬಯ್ಯ ಜೆಸಿ ಎಂ.ಎಂ.ಅಶೋಕ್, ಜೆಸಿ ರಾಜ ಸುಬ್ಬಯ್ಯ ಮತ್ತಿತರರು ಮಡಿಕೇರಿಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ಪೊನ್ನಂಪೇಟೆಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಕೊವೀಡ್ ಕಾರಣದಿಂದಾಗಿ ಮಡಿಕೇರಿಯಲ್ಲಿ ನಡೆಸಲಾಯಿತು ಎಂದು ಗಯ ಜೋಯಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷ ಜೆಸಿ ಪಿ.ಬಿ.ನಟೇಶ್ ಹಾಜರಿದ್ದರು.