ಅಶೋಕಪುರ ವಾರ್ಡ್ ನಲ್ಲಿ ಕಾಂಗ್ರೆಸ್ ಆರೋಗ್ಯ ಹಸ್ತ ಕಾರ್ಯಕ್ರಮ

14/09/2020

ಮಡಿಕೇರಿ ಸೆ. 14 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರೂಪಿಸಿರುವ ಆರೋಗ್ಯ ಹಸ್ತ ಕಾರ್ಯಕ್ರಮ ನಗರದ ಅಶೋಕಪುರ ವಾರ್ಡ ನಲ್ಲಿ ನಡೆಯಿತು.

ಮನೆ ಮನೆಗೆ ತೆರಳಿದ ಕೊರೊನಾ ವಾರಿಯರ್ಸ್‌ ಗಳು ಸಾರ್ವಜನಿಕರ ದೇಹದ ಉಷ್ಣತೆ , ಆಮ್ಲಜನಕದ ಪ್ರಮಾಣ ಮತ್ತು ನಾಡಿಮಿಡಿತವನ್ನು ತಪಾಸಣೆ ಮಾಡಿ, ಮಾಹಿತಿಯನ್ನು ಲಿಖಿತ ರೂಪದಲ್ಲಿ ದಾಖಲಿಸಿದರು.

ಕಾಂಗ್ರೆಸ್ ಪಕ್ಷವು ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವುದಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ಬ್ಲಾಕ್ ಕೊರೋನಾ ವಾರಿಯರ್ಸ್‌ ಗಳಾದ ಮೈಕಲ್ ಮಾರ್ಷಲ್ ಮತ್ತು ಮುದ್ದುರಾಜ್ ತಪಾಸಣೆ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಂಯೋಜಕ ಹೆಚ್ . ಎಂ. ನಂದಕುಮಾರ್ ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರಾ ಮೈನಾ, ಡಿಸಿಸಿ ಸದಸ್ಯ ಪುಷ್ಪ ಪೂಣಚ್ಚ , ಯುವ ಕಾಂಗ್ರೆಸ್ ನಗರಾಧ್ಯಕ್ಷ ಸದಾ ಮುದ್ದಪ್ಪ ಇದ್ದರು.