ನಲ್ವತೇಕರೆ ಎಸ್.ಎಸ್.ಎಫ್ ನಿಂದ ಮಾಫಾಜ್ ತರಗತಿ

September 14, 2020

ಮಡಿಕೇರಿ ಸೆ. 19 : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಮಿತಿ ವತಿಯಿಂದ ನಲ್ವತೇಕರೆ ಶಾಖೆಯಲ್ಲಿ ಏಕದಿನ ಯೂನಿಟ್ ನಾಯಕರಿಗೆ ತರಬೇತಿಯನ್ನು (ಮಫಾಜ್) ಸುಳ್ಯಾ ಎಸ್.ಎಸ್.ಎಫ್ ಸೆಕ್ಟರ್ ಅಧ್ಯಕ್ಷರಾದ ಸ್ವಬಾಹ್ ಸಖಾಫಿ ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಮುಸ್ಲಿಂ ಜಮಾಅತ್ ಸದಸ್ಯರಾಗಿ ನಲ್ವತ್ತೇಕರೆಯಿಂದ ಆಯ್ಕೆಯಾದ ಎಸ್.ಎಸ್.ಎಫ್ ಸಕ್ರೀಯ ಕಾರ್ಯಕರ್ತ ಹಾಗೂ ಸಮಾಜ ಸೇವಕ ಅಬ್ದುಲ್ ಸಲಾಂ ಅವರನ್ನು ಎಸ್.ವೈ.ಎಸ್.
ಎಸ್.ಎಸ್.ಎಫ್ ನಾಯಕರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಎಸ್.ವೈ.ಎಸ್ ಸಿದ್ಹಾಪುರ ಸೆಂಟ್ರಲ್ ಸಮಿತಿ ಅಧ್ಯಕ್ಷರಾದ ಶಿಹಾಬ್ ಲತೀಫಿ, ಎಸ್ ಎಸ್.ಎಸ್.ಎಫ್ ಸೆಕ್ಟರ್ ಅಧ್ಯಕ್ಷರಾದ ರಜಾಖ್ ಸಹದಿ, ಡಿವಿಷನ್ ಅಧ್ಯಕ್ಷರಾದ ಯೂಸುಫ್ ಝೈನಿ, ಶಾಖಾ ಕಾರ್ಯದರ್ಶಿ ಅಬ್ದುರಹೀಮ್, ಎಸ್.ವೈ ಎಸ್.ಹಾಗೂ ಎಸ್.ಎಸ್.ಎಫ್ ಶಾಖೆಯ ನಾಯಕರು ಪಾಲ್ಗೊಂಡಿದ್ದರು.

error: Content is protected !!