ಎಸ್.ಕೆ.ಎಸ್.ಎಸ್.ಎಫ್ : ಬಹರೈನ್ ಕೊಡಗು ನೂತನ ಸಮಿತಿ ಅಧ್ಯಕ್ಷರಾಗಿ ಇಬ್ರಾಹಿಂ ದಾರಿಮಿ ಆಯ್ಕೆ

September 14, 2020

ಮಡಿಕೇರಿ ಸೆ. 19 : ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ ಈಗಾಗಲೇ ಯುಎಇ, ಕತಾರ್ ಸಮಿತಿಯನ್ನು ರಚಿಸಲಾಗಿದ್ದು, ಇದೀಗ ಬಹರೈನ್ ಕೇಂದ್ರೀಕರಿಸಿ ಕಾರ್ಯನಿರ್ವಹಿಸಲು ನೂತನ ಸಮಿತಿಯನ್ನು ರಚಿಸಲಾಗಿದೆ.
ಆನ್ ಲೈನ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಜಿಸಿಸಿ ಉಪಾಧ್ಯಕ್ಷರಾದ ಜೈನುದ್ದೀನ್ ನೇತೃತ್ವದಲ್ಲಿ ನೂತನ‌ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಸಿಸಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್ ವಿರಾಜಪೇಟೆ ಸಮಿತಿ ರಚನೆಯ ಮೇಲುಸ್ತುವಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಸ ಉಸ್ತಾದ್ ವಿರಾಜಪೇಟೆ ,ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ .ಎಸ್ ಎಸ್ ಎಫ್ ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ವಹಿಸಿದ್ದರು.

ಎಸ್.ಕೆ .ಎಸ್.ಎಸ್ ಎಫ್-ಬಹರೈನ್ ಕೊಡಗು ನೂತನ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹಿಂ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಕೆ. ಐ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಮಹಮ್ಮದ್ ಅಲಿ, ಉಪಾಧ್ಯಕ್ಷರುಗಳಾಗಿ ಮೊಹಮ್ಮದ್ ರಾಫಿ ಹಾಗೂ ರಶೀದ್, ಸಹ ಕಾರ್ಯದರ್ಶಿಗಳಾಗಿ ನೂರುದ್ದೀನ್ ಹಾಗೂ ಉಸ್ಮಾನ್ ಆಯ್ಕೆಯಾಗಿದ್ದಾರೆ.

. ಜಿಸಿಸಿ ಕೋಶಾಧಿಕಾರಿ ರಝಾಕ್ ಫೈಝಿ, ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶಫೀಕ್ ನೆಲ್ಲಿಯಹುದಿಕೇರಿ ಹಾಗೂ ಜಿಸಿಸಿಯ ಹಲವು ನಾಯಕರುಗಳು, ಸದಸ್ಯರುಗಳು ಭಾಗವಹಿಸಿದ್ದರು.

ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್ ಸ್ವಾಗತಿಸಿ, ಯಾಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

error: Content is protected !!