ದಾನಿಗಳಿಂದ ಅಕಾಡೆಮಿ ಗ್ರಂಥಾಲಯಕ್ಕೆ ಪುಸ್ತಕ ಆಹ್ವಾನ

14/09/2020

ಮಡಿಕೇರಿ ಸೆ.14 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ತನ್ನ ಗ್ರಂಥಾಲಯದ ಪುಸ್ತಕ ಭಂಡಾರವನ್ನು ಹೆಚ್ಚಿಸುವುದಕ್ಕಾಗಿ ಅರೆಭಾಷೆ ಪ್ರದೇಶದ ಭಾಷೆ, ಸಂಸ್ಕೃತಿ, ಭೌಗೋಳಿಕತೆ, ವಿಜ್ಞಾನ, ಸಂಶೋದನೆ, ಅಭಿನಂದನೆ ಗ್ರಂಥ, ಮಾಸಿಕ, ಪಾಕ್ಷಿಕ ಪತ್ರಿಕೆ, ಸ್ಮರಣ ಸಂಚಿಕೆ ಹೀಗೆ ಸಂಬಂಧಪಟ್ಟ ಎಲ್ಲ ತರಹದ ಪುಸ್ತಕಗಳನ್ನು ಎಲ್ಲ ಭಾಷೆಗಳಿಂದಲೂ ದಾನಿಗಳಿಂದ ಅಹ್ವಾನಿಸುತ್ತಿದೆ. ಸಂಗ್ರಹದ ಜೊತೆಗೆ ಎಲ್ಲ ಪುಸ್ತಕಗಳು ಅರೆಭಾಷಿಗರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಡಿಜಿಟಲೈಸ್ ಮಾಡುವ, ಯೋಜನೆಯು ಇದೆ. ಇದು ಭಾಷೆಯ ಮೂಲ, ಇದರ ವ್ಯಾಪ್ತಿ ಅಧಿಕೃತವಾಗಿ ದಾಖಲಾಗಲು ಸಹಾಯವಾಗಬಹುದೆಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ(ದೂ: 08272-223055, ಮೊ ನಂ. 6362522677 ಇಲ್ಲಿಂದ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.