ಕೊಡಗಿನಲ್ಲಿ 2 ಸಾವಿರ ಮೀರಿದ ಕೋವಿಡ್ ಸೋಂಕಿತರ ಸಂಖ್ಯೆ

14/09/2020

ಮಡಿಕೇರಿ ಸೆ.14 : ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2042 ಆಗಿದೆ. ಇವರಲ್ಲಿ 1640 ಮಂದಿ ಗುಣಮುಖರಾಗಿದ್ದಾರೆ. 375 ಸಕ್ರಿಯ ಪ್ರಕರಣಗಳಿದ್ದು, 27 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 361 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 36 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಿರಾಜಪೇಟೆ ಕೆದಮುಳ್ಳೂರು ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ 50 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಐಗೂರು ಅಂಚೆಯ ಕಾಜೂರು ಗ್ರಾಮದ 32 ವರ್ಷದ ಪುರುಷ. ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ ಸರ್ಕಾರಿ ಶಾಲೆ ಸಮೀಪದ 56 ವರ್ಷದ ಪುರುಷ. ಸೋಮವಾರಪೇಟೆ ಬಳಗುಂದ ಗ್ರಾಮ ಮತ್ತು ಅಂಚೆಯ 30 ವರ್ಷದ ಮಹಿಳೆ. ವಿರಾಜಪೇಟೆ ಪಾಲಿಬೆಟ್ಟದ ವಿ.ಎಸ್.ಎಸ್.ಎನ್ ಸೊಸೈಟಿ ಸಮೀಪದ 60 ವರ್ಷದ ಮಹಿಳೆ. ಸೋಮವಾರಪೇಟೆ ಶಾಂತಳ್ಳಿ ಗ್ರಾಮ ಮತ್ತು ಅಂಚೆಯ 60 ವರ್ಷದ ಪುರುಷ. ಮಡಿಕೇರಿ ಚೈನ್ ಗೇಟ್ ಸಮೀಪದ 43 ವರ್ಷದ ಪುರುಷ. ಮಡಿಕೇರಿ ಕಣರ್ಂಗೇರಿ ವಸತಿಗೃಹದ 25 ವರ್ಷದ ಪುರುಷ. ಮಡಿಕೇರಿ ಅಪ್ಪಂಗಳದ ಎರವನಾಡುವಿನ ಪಳ್ಳಿಂಡರ ಮನೆಯ 49 ವರ್ಷದ ಮಹಿಳೆ. ವಿರಾಜಪೇಟೆ ಪೊಲೀಸ್ ವಸತಿಗೃಹದ 54 ವರ್ಷದ ಪುರುಷ. ಮಡಿಕೇರಿ ಚೈನ್ ಗೇಟ್ ಸಮೀಪದ 40 ವರ್ಷದ ಮಹಿಳೆ. ವಿರಾಜಪೇಟೆ ಬಾಳಗೋಡುವಿನ ಕೊಡವ ಸಮಾಜ ಕಟ್ಟಡ ಸಮೀಪದ 19 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಹುಂಜಿಗನಹಳ್ಳಿ ಗ್ರಾಮದ 48 ವರ್ಷದ ಪುರುಷ. ಸೋಮವಾರಪೇಟೆ ಕುಗೆಕೋಡಿಯ 78 ವರ್ಷದ ಪುರುಷ. ಸೋಮವಾರಪೇಟೆ ಗೌಡಳ್ಳಿ ಅಂಚೆಯ ಹೊನ್ನವಳ್ಳಿ ಗ್ರಾಮದ 79 ವರ್ಷದ ಮಹಿಳೆ. ಮಡಿಕೇರಿ ಕಕ್ಕಬ್ಬೆ ಅಂಚೆಯ ಕುಂಜಿಲ ಗ್ರಾಮದ 22 ವರ್ಷದ ಮಹಿಳೆ. ಮಡಿಕೇರಿ ಪಾರಣೆ ಗ್ರಾಮ ಮತ್ತು ಅಂಚೆಯ ವಿಜಯ ಬಾವಲಿಯ 27 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯ ರಸ್ತೆ ಸಮೀಪದ 42 ವರ್ಷದ ಮಹಿಳೆ. ಸೋಮವಾರಪೇಟೆ ಅಶೋಕ ರಸ್ತೆಯ 56 ವರ್ಷದ ಪುರುಷ ಮತ್ತು 46 ವರ್ಷದ ಮಹಿಳೆ. ಸೋಮವಾರಪೇಟೆ ಪೊಲೀಸ್ ಠಾಣೆಯ 27 ವರ್ಷದ ಪುರುಷ. ಸುಂಟಿಕೊಪ್ಪ ಕೆಇಬಿ ಸಮೀಪದ 60 ವರ್ಷದ ಪುರುಷ. ಸುಂಟಿಕೊಪ್ಪ ಶಿರಂಗಾಲ ನಾಕೂರುವಿನ 55 ವರ್ಷದ ಮಹಿಳೆ. ಸುಂಟಿಕೊಪ್ಪ ಕಂಬಿಬಾಣೆ ಚಿಕ್ಲಿ ಡ್ಯಾಂ ರಸ್ತೆಯ 30 ಮತ್ತು 61 ವರ್ಷದ ಮಹಿಳೆಯರು.
ವಿರಾಜಪೇಟೆ ತಿಮ್ಮಯ್ಯ ಲೇಔಟಿನ ಅಪ್ಪಯ್ಯ ಸ್ವಾಮಿ ರಸ್ತೆಯ 47 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ನಲವತ್ತೆಕ್ಕ್ರೆ ಗ್ರಾಮ ಮತ್ತು ಅಂಚೆಯ 42 ವರ್ಷದ ಪುರುಷ. ಮಡಿಕೇರಿ ಕಡಗದಾಳು ಗ್ರಾಮ ಮತ್ತು ಅಂಚೆಯ ಕತ್ತಲಕಾಡು ಪೈಸಾರಿಯ 34 ವರ್ಷದ ಪುರುಷ. ವಿರಾಜಪೇಟೆ ಬೊಯಿಕೇರಿಯ ಕದನೂರು ಗ್ರಾಮ ಮತ್ತು ಅಂಚೆಯ 34 ವರ್ಷದ ಪುರುಷ. ವಿರಾಜಪೇಟೆ ಅಮ್ಮತ್ತಿಯ ಕಾನ್ವೆಂಟ್ ರಸ್ತೆಯ 46 ವರ್ಷದ ಪುರುಷ. ಪಾಲಿಬೆಟ್ಟ ಟಾಟಾ ಕಾಫೀ ಲಿಮಿಟೆಡ್ ನ ಆರ್ಕೆಡ್ ಎಸ್ಟೇಟಿನ 25 ವರ್ಷದ ಮಹಿಳೆ. ವಿರಾಜಪೇಟೆ ಕಾನೂರುವಿನ ಸರ್ಕಾರಿ ಶಾಲೆ ಸಮೀಪದ 20 ಮತ್ತು 48 ವರ್ಷದ ಪುರುಷರು. ಗೋಣಿಕೊಪ್ಪ ಕಾವೇರಿ ಹಿಲ್ಸ್ ನ ಸೆಂಟ್ರೋಮ ಶಾಲೆ ಸಮೀಪದ 45 ವರ್ಷದ ಮಹಿಳೆ. ಮೈಸೂರು ಹುಣಸೂರುವಿನ 45 ವರ್ಷದ ಪುರುಷ. ವಿರಾಜಪೇಟೆ ಪಾಲೇರಿ ಜಂಕ್ಷನ್ನಿನ ಕುಟ್ಟ ರಸ್ತೆಯ ಕಾನೂರುವಿನ 59 ವರ್ಷದ ಪುರುಷ. ಪೆÇನ್ನಂಪೇಟೆ ನ್ಯಾಯಾಲಯ ಸಮೀಪದ ನಿಸರ್ಗ ನಗರದ 28 ವರ್ಷದ ಪುರುಷ. ವಿರಾಜಪೇಟೆ ಪೆÇನ್ನಂಪೇಟೆ ರಸ್ತೆಯ ಜೋಡುಬೀಟಿ ಗ್ರಾಮದ ಕಲ್ಯಾಣಿ ವರ್ಕ್ ಶಾಪ್ ಸಮೀಪದ 52 ವರ್ಷದ ಪುರುಷ. ಮಡಿಕೇರಿ ಡಿಟಿಸಿ ಸಮೀಪದ ಸುದರ್ಶನ ಲೇಔಟಿನ 5 ವರ್ಷದ ಬಾಲಕ. ವಿರಾಜಪೇಟೆ ಗೋಣಿಕೊಪ್ಪದ 2ನೇ ಬ್ಲಾಕಿನ 42 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಭಾಗಮಂಡಲ ಭೂತನಕಾಡುವಿನ 34 ವರ್ಷದ ಪುರುಷ.
ಸೋಮವಾರಪೇಟೆ ಬಳಗುಂದ ಗ್ರಾಮದ 11 ತಿಂಗಳ ಗಂಡು ಮಗು. ಬೆಂಗಳೂರಿನ 54 ವರ್ಷದ ಮಹಿಳೆ. ಮಡಿಕೇರಿ ನಾಪೆÇೀಕ್ಲುವಿನ ಎಮ್ಮೆಮಾಡುವಿನ ಕೂರ್ಲಿ ಶಾಲೆ ಸಮೀಪದ 39 ವರ್ಷದ ಪುರುಷ. ಮೈಸೂರು ಕೆ.ಆರ್ ನಗರದ 73 ವರ್ಷದ ಮಹಿಳೆ ಮತ್ತು 73 ವರ್ಷದ ಪುರುಷ. ಸೋಮವಾರಪೇಟೆ ಚೆಟ್ಟಳ್ಳಿಯ 27 ವರ್ಷದ ಪುರುಷ. ಸಿದ್ದಾಪುರ ಮಡಿಕೇರಿ ರಸ್ತೆಯ ಪಿಎಚ್ ಸೌಂಡ್ ಸಿಸ್ಟಮ್ ಸಮೀಪದ 51 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.