ಕೊಡವ ಸಾಹಿತ್ಯ ಅಕಾಡೆಮಿ : ಫೆಲೋಶಿಪ್ ದಾಖಲೀಕರಣ ಆಯ್ಕೆ ಸಮಿತಿ ಸಭೆ

ಮಡಿಕೇರಿ ಸೆ.14 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗೆ(ಸೆ.10) ಫೆಲೋಶಿಪ್ ದಾಖಲೀಕರಣ ಮಾಡಲು ಅರ್ಹರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮಿತಿ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಆಯ್ಕೆ ಸಭೆಗೆ ಪ್ರೊಫೆಸರ್ ಕೋಡೀರ ಲೋಕೇಶ್ ತಜ್ಞರಾಗಿ ಆಗಮಿಸಿದ್ದರು. ಅಲ್ಲದೆ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಪಿ.ಪ್ರಭುಕುಮಾರ್, ಡಾ.ಮೇಚಿರ ಸುಭಾಷ್ ನಾಣಯ್ಯ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ತೇಲಪಂಡ ಕವನ್ ಕಾರ್ಯಪ್ಪ ಇವರುಗಳು ಈ ಸಮಿತಿ ಸಭೆಯಲ್ಲಿ ಹಾಜರಿದ್ದರು.
ಸಮಿತಿಯ ಸಮ್ಮುಖದಲ್ಲಿ ಅರ್ಜಿದಾರರ ಸಂದರ್ಶನ ನಡೆಯಿತು. 12 ಅರ್ಜಿಗಳು ಬೇರೆ ಬೇರೆ ವಿಷಯದಲ್ಲಿ ಸಂಶೋಧನೆ ನಡೆಸಲು ಬಂದಿದೆ. ಕೊಡಗಿನಲ್ಲಿ ಸಂವಿಧಾನಿಕ ಸುಧಾರಣೆಗಳು ಮತ್ತು ಕೊಡವರ ಪ್ರಾತಿನಿಧ್ಯ, ಕೊಡವ ಸಂಸ್ಕøತಿ ಮತ್ತು ಮಹಿಳೆ, ಕೊಡವ ಸಂಸ್ಕøತಿ-ಸ್ಥಿತ್ಯಂತ್ರಗಳು, ಕೊಡಗಿನ ಅಸ್ಮಿತೆಯ ಕುರುಹು -ಹಾಕಿ, ಕೊಡಗಿನ ದೇವರ ಕಾಡುಗಳ ಒಂದು ವಿಶ್ಲೇಷಣೆ, ಕೊಡವ ಸಾಂಸ್ಕøತಿಕ ಆಭರಣಗಳು ಹಾಗೂ ಆಯುಧಗಳು, ಅನನ್ಯತೆಯಲ್ಲಿ ಆದಿ ಶ್ರೀ ಪನ್ನಂಗಾಲತಮ್ಮೆ, ಕೊಡವ ಭಾಷೆ ಮತ್ತು 8ನೇ ಪರಿಛೇಧ, ಒಥಿಣh ಚಿಟಿಜ ಡಿeಚಿಟiಣಥಿ oಜಿ ಏoಜಚಿvಚಿ ಛಿusಣoms(ಇಟಿgಟish) ಹಾಗೂ ದಾಖಲೀಕರಣಕ್ಕೆ ಕೊಡವ ಭಾಷಿಕರ ಐನ್‍ಮನೆ ಮತ್ತು ಕೈಮಡ, ಕೊಡವ ಭಾಷಿಕ ಜನಾಂಗಗಳ ಸಾಂಸ್ಕøತಿಕ ಅಧ್ಯಯನ, ಸೇರಿ ವೈವಿಧ್ಯಮಯವಾದ ವಿಷಯಗಳ ಬಗ್ಗೆ ಸಂಶೋಧನೆ ಮಾಡಲು ಹಾಗೂ ದಾಖಲೀಕರಣ ಮಾಡಲು ಆಸಕ್ತ ಅಭ್ಯರ್ಥಿಗಳಲ್ಲಿ ಕಂಡುಬಂದಿದೆ. ಈ ಅಭ್ಯರ್ಥಿಗಳು 1 ವರ್ಷದವರೆಗೆ ಸಂಶೋಧನೆ ನಡೆಸಲಿದ್ದಾರೆ. ಹಾಗೂ ಅವರ ಸಂಶೋಧನೆಯನ್ನು ಅಕಾಡೆಮಿ ಪುಸ್ತಕ ರೂಪದಲ್ಲಿ ಪ್ರಕಟ ಮಾಡುವುದು. ಸಂಶೋಧನೆಗೆ ಸ್ನಾತಕೋತ್ತರ ಪದವಿ ಕನಿಷ್ಠ ವಿದ್ಯಾರ್ಹತೆಯಾಗಿದೆ. ಈ ಯೋಜನೆಯಿಂದ ಕೊಡವ ಸಾಹಿತ್ಯ, ಕಲೆ, ಜನಪದ ಸಂಸ್ಕøತಿಯ ಬಗ್ಗೆ ಹೆಚ್ಚು ಸಂಶೋಧನೆಯಾಗುವುದು. ಅಲ್ಲದೆ ಸಂಶೋಧನಾಲಯ ಮತ್ತು ಗ್ರಂಥಾಲಯವು ಕೂಡ ಅಭಿವೃದ್ಧಿಗೊಳ್ಳುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.