ಮಡಿಕೇರಿ ಗ್ರಂಥಾಲಯ ಪ್ರವೇಶಕ್ಕೆ ಮುಕ್ತ

15/09/2020

ಮಡಿಕೇರಿ ಸೆ.15 : ಕೋವಿಡ್ ಹಿನ್ನೆಲೆ ಮಾ.26 ರಿಂದ ನಿರ್ಬಂಧಿಸಲಾಗಿದ್ದ ಆಧುನೀಕರಣಗೊಂಡಿರುವ ಮಡಿಕೇರಿಯ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ಮುಕ್ತಗೊಳಿಸಲಾಗಿದೆ. ಓದುಗರು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಮನವಿ ಮಾಡಿದ್ದಾರೆ.