ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2075 ಕ್ಕೆ ಏರಿಕೆ

15/09/2020

ಮಡಿಕೇರಿ ಸೆ.15 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 21 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 12 ಸೇರಿದಂತೆ ಒಟ್ಟು 33 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2075 ಆಗಿದ್ದು, 1661 ಮಂದಿ ಗುಣಮುಖರಾಗಿದ್ದಾರೆ. 387 ಸಕ್ರಿಯ ಪ್ರಕರಣಗಳಿದ್ದು, 27 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 362 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿ ಚೈನ್ ಗೇಟ್ ಬಳಿಯ 13 ವರ್ಷದ ಬಾಲಕ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಬಾಳಗುಂದ ಗ್ರಾಮ ಮತ್ತು ಅಂಚೆಯ 56 ವರ್ಷದ ಮಹಿಳೆ. ಸಿದ್ದಾಪುರ ಗುಹ್ಯದ ಬಿಜಿಎಸ್ ಶಾಲೆ ಸಮೀಪದ 21 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆಯ ಹಾಸನ ರಸ್ತೆ ವೃತ್ತದ 27 ವರ್ಷದ ಮಹಿಳೆ. ಮಡಿಕೇರಿ ತಾಳತ್ತಮನೆಯ ಕಾಟಕೇರಿಯ 4 ನೇ ಕ್ರಾಸ್ ನ 29 ವರ್ಷದ ಪುರುಷ. ಮಡಿಕೇರಿ ಪೆನ್‍ಷನ್ ಲೈನಿನ ಟೌನ್ ಹಾಲ್ ಹಿಂಭಾಗದ 47 ವರ್ಷದ ಪುರುಷ ಮತ್ತು 68 ವರ್ಷದ ಮಹಿಳೆ. ಕುಶಾಲನಗರ ಬಲಮುರಿ ದೇವಾಲಯ ಹಿಂಭಾಗದ ಬಸವೇಶ್ವರ ಬಡಾವಣೆ 2 ನೇ ಬ್ಲಾಕಿನ 55 ವರ್ಷದ ಮಹಿಳೆ. ಮಡಿಕೇರಿ ಹೊದವಾಡ ಬುಲಿಬಾಣೆಯ 38 ವರ್ಷದ ಪುರುಷ. ಮಡಿಕೇರಿ ಇಂದಿರಾನಗರ ಅಂಗನವಾಡಿ ಬಳಿಯ 23 ವರ್ಷದ ಮಹಿಳೆ ಮತ್ತು 53 ವರ್ಷದ ಪುರುಷ. ವಿರಾಜಪೇಟೆ ತಿತಿಮತಿ ಗ್ರಾಮದ ನೊಕ್ಯ ಅಂಚೆಯ ಎಡೆತೊರೆ ಗ್ರಾಮದ 28 ವರ್ಷದ ಮಹಿಳೆ. ಗೋಣಿಕೊಪ್ಪ ಎಚ್.ಸಿ ಪುರದ ಆರ್.ಎಂ.ಸಿ ಸಮೀಪದ 32 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪದ ಕಳತ್ಮಾಡುವಿನ ಜಿಎಂಪಿ ಶಾಲೆ ಸಮೀಪದ 49 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕಿ. ಗೋಣಿಕೊಪ್ಪ ಎಚ್.ಸಿ ಪುರದ ಎಂ.ಆರ್.ಎಫ್ ಫ್ಯಾಕ್ಟರಿ ಸಮೀಪದ 10 ತಿಂಗಳ ಹೆಣ್ಣು ಮಗು. ಗೋಣಿಕೊಪ್ಪ ಎಚ್.ಸಿ ಪುರದ ಪಿಆರ್ ಫರ್ನೀಚರ್ ಸಮೀಪದ ಜೆ.ಬಿ ಕಾಂಪ್ಲೆಕ್ಸಿನ 42 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ. ಕುಶಾಲನಗರ ಹೆಬ್ಬಾಲೆ ಮುಖ್ಯ ರಸ್ತೆಯ 58 ವರ್ಷದ ಪುರುಷ. ಕುಶಾಲನಗರ ಬಲಮುರಿ ದೇವಾಲಯ ಬಳಿಯ 4ನೇ ಬ್ಲಾಕಿನ 30 ವರ್ಷದ ಪುರುಷ ಮತ್ತು 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ಕಡಂಗ ಗ್ರಾಮ ಮತ್ತು ಅಂಚೆಯ 11 ವರ್ಷದ ಬಾಲಕಿ. ವಿರಾಜಪೇಟೆ ಗಾಂಧೀನಗರದ 47 ವರ್ಷದ ಪುರುಷ. ಕುಶಾಲನಗರ ಗುಮ್ಮನಕೊಲ್ಲಿಯ 33 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕಾವೇರಿ ಲೇಔಟಿನ 32 ವರ್ಷದ ಮಹಿಳೆ. ಸೋಮವಾರಪೇಟೆ ತಾಳತ್ತರ ಶೆಟ್ಟಳ್ಳಿಯ ಬೈರವೇಶ್ವರ ದೇವಾಲಯ ಬಳಿಯ 73 ವರ್ಷದ ಪುರುಷ. ಮಡಿಕೇರಿ ನಾಪೆÇೀಕ್ಲುವಿನ ಹಳೆತಾಲೂಕುವಿನ 39 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆ ಬಸವೇಶ್ವರ ಬಡಾವಣೆಯ 2ನೇ ಹಂತದ 50 ವರ್ಷದ ಮಹಿಳೆ. ಮಡಿಕೇರಿ ಡಿಟಿಸಿ ಸುದರ್ಶನ ಎಕ್ಸ್‍ಟೆನ್ಸ್‍ನ್ನಿನ 39 ವರ್ಷದ ಪುರುಷ. ಮಡಿಕೇರಿ ದೇಚೂರುವಿನ ಗಣಪತಿ ದೇವಾಲಯ ಸಮೀಪದ 66 ವರ್ಷದ ಪುರುಷ. ಮಡಿಕೇರಿ ಪೆನ್ ಷನ್ ಲೇಔಟಿನ ಟೌನ್ ಹಾಲ್ ಹಿಂಭಾಗದ 12 ವರ್ಷದ ಬಾಲಕಿ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಪೆÇಲೀಸ್ ವಸತಿಗೃಹದ 55 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.