ಕೊಡಗಿನ ಹಾಲೇರಿ ಅರಸರ ಅವಹೇಳನ ಆರೋಪ : ಕೊರವೇ ಅಧ್ಯಕ್ಷರ ವಿರುದ್ಧ ದೂರು

15/09/2020

ಸೋಮವಾರಪೇಟೆ ಸೆ.15 : ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಹಾಲೇರಿ ಅರಸರ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ, ವ್ಯಕ್ತಿಯ ವಿರುದ್ಧ ಜಿಲ್ಲಾ ವೀರಶೈವ, ಲಿಂಗಾಯುತ, ಜಂಗಮ ಅರ್ಚಕರ ಸಂಘದ ವತಿಯಿಂದ ಪಟ್ಟಣ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಕೊಡಗು ಜಿಲ್ಲಾ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಎಂಬವರು ಸಂಸದ ಪ್ರತಾಪ್‍ಸಿಂಹ ಅವರಿಗೆ ಫೇಸ್‍ಬುಕ್‍ನಲ್ಲಿ ಬರೆದ ಬಹಿರಂಗ ಪತ್ರದಲ್ಲಿ ಒಂದು ಕಡೆ “ಅದ್ಯಾವುದೋ ಬೂದಿಬಳಿದುಕೊಂಡು ಬಂದವನನ್ನು ರಾಜನನ್ನಾಗಿ ಕೂರಿಸಿ ಪಡಬಾರದ ಕಷ್ಟ ಪಡುತ್ತಿದ್ದೇವೆ” ಎಂದು ಬರೆದಿದ್ದಾರೆ. ಇದೊಂದು ಶಾಂತಿ ಕದಡುವ ಪ್ರಯತ್ನವಾಗಿದೆ. ಪವನ್ ವಿರುದ್ಧ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಮೋಹನ್ ಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಖಜಾಂಚಿ ಬಸವಕುಮಾರ್ ಶಾಸ್ತ್ರಿ, ಜಯರಾಜ್ ಹಾಜರಿದ್ದರು.