ಕುಸಿದು ಬಿದ್ದು ನಟ ಪ್ರಬೀಶ್ ಸಾವು

September 16, 2020

ಕೊಚ್ಚಿ ಸೆ.16 : ಪ್ರಸಿದ್ದ ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್(44) ಶೂಟಿಂಗ್ ವೇಳೆಯಲ್ಲೇ ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪಿದ್ದಾರೆ.
ನಟ ಪ್ರಬೀಶ್ ಚಕ್ಕಲಕ್ಕಲ್ ಅವರು ಮಲಯಾಳಂ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಅವರು ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಸಮಯದಲ್ಲಿ ನಟ ಕುಸಿದು ಬಿದ್ದು ಪ್ರಜ್ಞೆ ತಪ್ಪಿ ಸಾವಿಗೀಡಾಗಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಪ್ರಬೀಶ್ ಯೂಟ್ಯೂಬ್ ಚಾನೆಲ್ ಚಿತ್ರೀಕರಣದಲ್ಲಿದ್ದಾಗ ಈ ಘಟನೆ ನಡೆದಿದೆ.
ಇವರೊಡನೆ ಸೆಟ್ ನಲ್ಲಿದ್ದ ಸಹೋದ್ಯೋಗಿಗಳು ಕೆಲಸ ಪೂರ್ಣವಾದ ನಂತರ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿದ್ದರು. ಆ ವೇಳೆ ಪ್ರಬೀಶ್ ಕುಸಿದು ಬಿದ್ದಿದ್ದಾರೆ.

error: Content is protected !!